ದೆಹಲಿ ಬಾಂಬ್ ಸ್ಪೋಟ: ಕುಶಾಲನಗರದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ
ಕುಶಾಲನಗರ ನ15: ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟವನ್ನು ಖಂಡಿಸಿ ಕುಶಾಲನಗರ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರದ ಕಾರ್ಯಪ್ಪ ವೃತ್ತದ ಬಳಿ ಆಗಮಿಸಿದ ಪ್ರತಿಭಟನಾಕಾರರು, ಭಯೋತ್ಪಾದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಿಸಿದವರು ಇಂತಹ ದುಷ್ಟಶಕ್ತಿಗಳನ್ನು ಅಡಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಿ.ಎಲ್.ನಾಗರಾಜ್, ಘಟನೆಯು ಖಂಡನಾರ್ಹ. ಜೀವವನ್ನು ಉಳಿಸುವ ವೈದ್ಯರು ಭಯೋತ್ಪಾದನೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಜನತೆ ಇದರು ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಮಂಜುನಾಥ್, ರಾಜೀವ್, ಪ್ರವೀಣ್, ಹರೀಶ್, ದಿನೇಶ್, ಮುಂಜು, ಸೌರವ್, ಸಂತೋಷ್, ಸುಮನ್, ಚಂದ್ರು ಹಾಗೂ ಇನ್ನಿತರರು ಇದ್ದರು.
