ವಿರಾಜಪೇಟೆ;ಗ್ಯಾಸ್ ದರ ಏರಿಕೆ ಖಂಡಿಸಿ ಪ್ರತಿಭಟನೆ

Mar 14, 2026 - 19:49
 0  693
ವಿರಾಜಪೇಟೆ;ಗ್ಯಾಸ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ವಿರಾಜಪೇಟೆ: ಕೇಂದ್ರ ಸರಕಾರವು ನಿತ್ಯ ಬಳಕೆಯ ಗ್ಯಾಸ್ ದರವನ್ನು ಏರಿಕೆ ಮಾಡಿರುವುದುನ್ನು ಖಂಡಿಸಿ ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸವಾದಿ) ವಿರಾಜಪೇಟೆ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.

ಭಾರತ ಕಮ್ಯೂನಿಸ್ಟ್ ಪಕ್ಷ( ಮಾರ್ಕ್ಸವಾದಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ.ಸಿ. ಸಾಬು ಅವರ ನೇತೃತ್ವದಲ್ಲಿ ನಡೆದ ಗ್ಯಾಸ್ ಬೆಲೆ ಎರಿಕೆ ಖಂಡಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್ ಪಕ್ಷ( ಮಾರ್ಕ್ಸವಾದಿ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಬಿ ರಮೇಶ್ ಅವರು ಪಶ್ವಿಮ ಏಷ್ಯಾದ ಇಸ್ರೇಲ್ ಮತ್ತು ಇರಾನ್ ದೇಶಗಳ ಮಧ್ಯೆ ಯುದ್ದ ನಡೆಯುತ್ತಿರುವುದು ದೇಶದ ಆಂತರಿಕ ವ್ಯವಸ್ಥೆಯ ಬಗ್ಗೆ. ಯುದ್ದಕ್ಕೆ ಅಮೇರಿಕ ಸಾತ್ ನೀಡಿದ್ದು ಈ ಸಂಘರ್ಷದಿAದಾಗಿ ತೈಲ ಉತ್ವನ್ನಗಳು ಆಮದುವಿಗೆ ತಡೆಯಾಗಿದೆ. ಯುದ್ದ ನಡೆಯುವುದಕ್ಕಿಂತ ಮುಂಚೆ ಕೇಂದ್ರ ಸರಕಾರವು ನಿತ್ಯ ಬಳಕೆಯಾಗುವ ಗ್ಯಾಸ್ ಬೆಲೆ ಎರಿಕೆ ಮಾಡಿರುವುದು ಖಂಡನೀಯ. ಯಾವ ದೇಶವು ಯುದ್ದವನ್ನು ಬಯಸುವುದಿಲ್ಲ. ಸರ್ವೋಚ್ಚ ಅಧಿಕಾರದ ಧಾಹದಿಂದ ಯುದ್ದ ನಡೆಯುತ್ತಿದೆ. ಕೇಂದ್ರ ಸರಕಾರವು ಸುಮಾರು 50 ದಿನಗಳವರೆಗೆ ತೈಲ ಉತ್ಪನ್ನಗಳ ದಾಸ್ತಾನು ಇದೆ. ಆತಂಕ ಬೇಡ ಎಂದು ಜನತೆಯಲ್ಲಿ ಮನವಿ ಮಾಡಿದೆ. ಗ್ಯಾಸ್ ನಂಬಿಕೊAಡು ಜೀವನ ಸಾಗಿಸುವವರು ಇಂದು ಬೀದಿಗೆ ಬಂದಿದ್ದಾರೆ. ಜನತೆಯ ಹಿತ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಹೇಳಿದರು.

   ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ. ಸಾಬು ಮಾತನಾಡಿ ಕಟ್ಟಿಗೆ ಒಲೆ ಬಿಟ್ಟು ಗ್ಯಾಸ್ ಬಳಸಿ ಹೋಗೆ ರಹಿತ ಜೀವನ ನಿಮ್ಮದಾಗಿಸಿ ಎಂದು ಹೇಳಿಕೊಂಡು ಬಂದ ಕೇಂದ್ರ ಸರಕಾರವು ಮತ್ತೊಮ್ಮೆ ಜನತೆಯನ್ನು ಗ್ಯಾಸ್ ಬೆಲೆ ಏರಿಕೆಗೊಳಿಸಿ ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿದಡೆಗಳಲ್ಲಿ ಮತ್ತು ತಮಿಳುನಾಡು, ಅಂದ್ರಪ್ರದೇಶ, ರಾಜ್ಯಗಳಲ್ಲಿ ಗ್ಯಾಸ್ ಸಮಸ್ಯೆ ತಲೆದೋರಿದೆ. ಗ್ಯಾಸ್ ನಂಬಿಕೊAಡು ಜೀವನ ಸಾಗಿಸುತಿದ್ದ ಹೋಟೆಲ್ ಉದ್ಯಮ ಮುಚ್ಚುವ ಹಂತಕ್ಕೆ ತಲುಪಿದೆ. ಗ್ಯಾಸ್ ವಿತರಕ ಮಳಿಗೆ ಮುಂದೆ ಜನತೆ ಸಾಲುಸಾಲು ನಿಲ್ಲುವಂತೆ ಮಾಡಿದೆ. ಯುದ್ದದ ಭೀತಿ ಎದುರಿಸುತ್ತಿರುವುದರಿಂದ ಎಂದು ಕೇಂದ್ರ ಸರಕಾರ ಹೇಳಿಕೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳಿಂದ ಜನಸಮಾನ್ಯರ ಬದುಕು ಮೂರ ಬಟ್ಟೆಯಾಗಿದೆ. ಗ್ಯಾಸ್ ಬೆಲೆ ಎರಿಕೆಗೊಳಿಸಿರುವ ಕೇಂದ್ರ ಸರ್ಕಾರವು ಜನರ ಮೇಲೆ ಒತ್ತಡ ಹೇರುವುದನ್ನು ಬಿಟ್ಟು ಶೀಘ್ರದಲ್ಲೇ ಬೆಲೆ ಇಳಿಸಬೇಕು ಎಂದು ಪಕ್ಷದ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

     ಸಿ.ಪಿ.ಐ. ಪಕ್ಷದ ಪ್ರಮುಖರಾದ ವಕೀಲ ಕೆ.ವಿ. ಸುನೀಲ್ ಮಾತನಾಡಿ, ಇತ್ತೀಚೆಗೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಹೆಚ್ಚಳ ಮಾಡಿರುವುದು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಮತ್ತೊಂದು ಭಾರೀ ಹೊರೆ ಹಾಕಿದಂತಾಗಿದೆ. ಈಗಾಗಲೇ ದುಬಾರಿ ಬೆಲೆಯಿಂದ ಸಂಕಷ್ಟದಲ್ಲಿರುವ ಸಾಮಾನ್ಯ ಜನತೆಗೆ ಈ ನಿರ್ಧಾರ ದೊಡ್ಡ ಹೊಡೆತವಾಗಿದೆ. ಚುನಾವಣೆಯ ಮುನ್ನ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಅವಶ್ಯಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಿ ನಂತರ ಬೆಲೆ ಏರಿಕೆ ಮಾಡುವುದು ನರೇಂದ್ರ ಮೋದಿ ರವರ ತಂತ್ರಗಾರಿಕೆಯಾಗಿದೆ ಎಂದು ಆರೋಪಿಸಿದರು.

   ಸಿಪಿಐಎಂನ ಜಿಲ್ಲಾ ಮುಖಂಡರಾದ ಡಾ. ಇ.ಆರ್. ದುರ್ಗಾಪ್ರಸಾದ್ ಮಾತನಾಡಿ, ವಿಶ್ವದ ಮುಂದೆ ಭಾರತದ ಸ್ವಾಭಿಮಾನವನ್ನು ರಕ್ಷಿಸುವ ಬಲವಾದ ರಾಜತಾಂತ್ರಿಕ ನಿಲುವು ತಾಳಬೇಕಾದ ಸಂದರ್ಭದಲ್ಲಿ ಸರ್ಕಾರದ ದುರ್ಬಲ ಧೋರಣೆ ಕಂಡುಬರುತ್ತಿರುವುದು ವಿಷಾದನೀಯ. ಭಾರತದಂತಹ ಮಹತ್ವದ ಬಲಿಷ್ಠ ರಾಷ್ಟçವು ಯಾವುದೇ ವಿದೇಶಿ ರಾಷ್ಟçಗಳ ಸೂಚನೆ ಅಥವಾ ಒತ್ತಡದ ಆಧಾರದ ಮೇಲೆ ತನ್ನ ಆರ್ಥಿಕ ಮತ್ತು ಇಂಧನ ನೀತಿಗಳನ್ನು ರೂಪಿಸಬಾರದು. ಈ ಹಿನ್ನೆಲೆಯಲ್ಲಿ ಎಲ್‌ಪಿಜಿ ದರ ಏರಿಕೆ ಸೇರಿದಂತೆ ಸಾಮಾನ್ಯ ಜನರ ಬದುಕನ್ನು ದುಬಾರಿಯಾಗಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಜನರ ಜೀವನೋಪಾಯವನ್ನು ಸಂಕಷ್ಟಕ್ಕೆ ದೂಡುತ್ತಿರುವ ಈ ಸರ್ಕಾರ ತನ್ನ ನೈತಿಕ ಹೊಣೆಗಾರಿಕೆಯನ್ನು ಒಪ್ಪಿಕೊಂಡು ತಕ್ಷಣವೇ ದರ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದರೆ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡAತಾಗುತ್ತದೆ.

ಆದ್ದರಿAದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಕಾಪಾಡುವ ದೃಷ್ಟಿಯಿಂದ ಎಲ್‌ಪಿಜಿ ದರ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಹಾಗೂ ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಸ್ಪಷ್ಟ ಮತ್ತು ದೃಢ ನೀತಿಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಜನರ ಆಕ್ರೋಶವನ್ನು ಎದುರಿಸಲು ಕೇಂದ್ರ ಸರ್ಕಾರ ಸಿದ್ಧರಾಗಬೇಕಾಗುತ್ತದೆ ಎಂಬುದನ್ನು ಈ ಪ್ರತಿಭಟನೆಯ ಮೂಲಕ ಎಚ್ಚರಿಸುತ್ತೇವೆ ಎಂದರು. 

   ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸತೀಶ್, ಸಿಪಿಐಎಂನ ಶಾಖಾ ಘಟಕದ ಸದಸ್ಯರಾದ ಕೆ.ಎಸ್. ರತೀಶ್, ಪಿ.ಖಾಲಿದ್, ಕೆ.ಕೆ. ಹರಿದಾಸ್, ಕೆ.ಎ. ಖಾಸಿಂ, ಡಿವೈಎಫ್‌ಐನ ಜಿಲ್ಲಾ ಮುಖಂಡರಾದ ಸಾದಿಕ್, ಸಿಪಿಐಎಂ ನ ಶಾಖಾ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು ಭಾಗವಹಿಸಿದ್ದರು. ಬೆಲೆ ಏರಿಕೆ ವಿರುಧ್ದ ಘೋಷಣೆಗಳನ್ನು ಕೂಗಿದರು.

What's Your Reaction?

Like Like 1
Dislike Dislike 0
Love Love 3
Funny Funny 2
Angry Angry 0
Sad Sad 0
Wow Wow 1