ಅಮ್ಮಕೊಡವ ಸಮಾಜದ ವತಿಯಿಂದ ಎ.ಎಸ್.ಪೊನ್ನಣ್ಣ ನವರಿಗೆ ಸನ್ಮಾನ
admincoorgdaily

ಮಡಿಕೇರಿ; ಅತ್ಯಂತ ಪುಟ್ಟ ಸಮುದಾಯ ಎಂದು ಗುರುತಿಸಿಕೊಂಡಿರುವ ಕೊಡಗಿನ ಅಮ್ಮ ಕೊಡವ ಸಮುದಾಯವನ್ನು ಗುರುತಿಸಿ ಅವರ ಏಳ್ಗೆಗಾಗಿ ಸರ್ಕಾರದಿಂದ 20 ಲಕ್ಷ ರೂಗಳ ಅನುದಾನ ಒದಗಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರನ್ನು ಸಮಾಜದ ಪ್ರಮುಖರು ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ ನವರು ಕೊಡಗಿನಲ್ಲಿ ಅನೇಕ ಸಮುದಾಯದವರು ಅನ್ಯೋನ್ಯತೆ ಯಿಂದ ಬಾಳುತ್ತಿದ್ದು ವಿರಳ ಜನಸಂಖ್ಯೆ ಇರುವುದರಿಂದ ಸರ್ಕಾರದಿಂದ ಆರ್ಥಿಕ ನೆರವು ಪಡೆಯಲು ಸಾಧ್ಯವಾಗಿರಲಿಲ್ಲ.ಅಂತಹ ಎಲ್ಲಾ ಸಮುದಾಯಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲು ತಾವು ಬದ್ದರಾಗಿದ್ದು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ತಿಳಿಸಿದರು.
ಅಮ್ಮಕೊಡವ ಸಮಾಜದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾನಂಡ ಪ್ರಥ್ಯು ರವರು ಮಾತನಾಡಿ ತಮ್ಮ ಸಮುದಾಯ ಸೇರಿದಂತೆ ಕೊಡಗಿನಲ್ಲಿರು ಎಲ್ಲಾ ಸಮುದಾಯಗಳ ಬೇಡಿಕೆಯನ್ನು ಆಲಿಸಿ ಅವುಗಳಿಗೆ ಎ.ಎಸ್.ಪೊನ್ನಣ್ಣ ನವರು ಸರ್ಕಾರದಿಂದ ಪರಿಹಾರ ಒದಗಿಸುತ್ತಿರುವುದು ಜಿಲ್ಲೆಯ ಸಾಮರಸ್ಯತೆಗೆ ಮುನ್ನುಡಿ ಬರೆದಿದೆ. ಅಮ್ಮ ಕೊಡವ ಸಮಾಜದ ಅಭಿವೃದ್ಧಿ ಗಾಗಿ 20 ಲಕ್ಷ ರೂಗಳ ಬೃಹತ್ ಅನುದಾನವನ್ನು ಎ.ಎಸ್.ಪೊನ್ನಣ್ಣ ನವರು ಒದಗಿಸಿದ್ದು ಇದಕ್ಕಾಗಿ ಅಮ್ಮ ಕೊಡವ ಸಮಾಜದ ಸರ್ವ ಬಂಧುಗಳು ಅಬಾರಿಯಾಗಿದ್ದೇವೆ ಎಂದು ತಿಳಿಸಿದರು.
ಸಮಾಜದ ಪ್ರಮುಖರಾದ ಕೊಡಿಂಜಮ್ಮನ ಬಾಲಕೃಷ್ಣ, ಪುತ್ತಾಮನೆ ಅನಿಲ್ ಪ್ರಸಾದ್,ನೇರಿಯಂಡಮ್ಮನ ಸುಬ್ರಮಣಿ,ಜನಾರ್ಧನ,ಬಾನಂಡ ಸುನೀತ್,,ಸೂದನ್,ಹೆಮ್ಮಚ್ಚಿ ಮನೆ ಎನ್ ಹರೀಶ್,ಹೆಚ್,ಎಂ.ಹರೀಶ್,ಮನ್ನಕಮನೆ ಎ.ಬಾಲಕೃಷ್ಣ, ಎಂ.ಎಂ.ಬಾಲಕೃಷ್ಣ, ಹೆಚ್.ಆರ್.ಮದನ್,ಪುತ್ತಾಮನೆ ಪರ್ವತ್,ಯತೀಶ್, ಹೆಚ್.ಎಂ.ಪ್ರಶಾಂತ್,ಶರಣು,ವಿಜು ಮತ್ತಿತರರು ಉಪಸ್ಥಿತರಿದ್ದರು.