ಧರ್ಮಸ್ಥಳ: ಮೃತದೇಹ ಹೂತು ಹಾಕಿದ ಪ್ರಕರಣ,ಅಸ್ಥಿಪಂಜರ ಹುಡುಕಾಟಕ್ಕಾಗಿ ಕಾರ್ಯಚರಣೆ ಆರಂಭ

ಧರ್ಮಸ್ಥಳ: ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣ ಮೂರನೇ ದಿನದ ಅಸ್ಥಿಪಂಜರ ಹುಡುಕಾಟಕ್ಕಾಗಿ ಜುಲೈ 30 ರಂದು 11ಗಂಟೆಯ ಸುಮಾರಿಗೆ ಸಾಕ್ಷಿ ದೂರುದಾರನೊಂದಿಗೆ ಎಸ್.ಐ.ಟಿ ತಂಡ ನೇತ್ರಾವತಿ ಸ್ನಾನಘಟ್ಟಕ್ಕೆ ಆಗಮಿಸಿದೆ. 10 ಗಂಟೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ತನ್ನ ವಕೀಲರ ಜೊತೆ ಆಗಮಿಸಿದ್ದು ಕಚೇರಿಯ ಪ್ರಕ್ರಿಯೆಗಳನ್ನು ಮುಗಿಸಿ ತಂಡ ನೇತ್ರಾವತಿ ಸ್ನಾನಘಟ್ಟಕ್ಕೆ ತಲುಪಿದೆ.