ಕುಂಬಳದಾಳು-ಮೂರ್ನಾಡು ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ: ಕಳೆದ ಎರಡು ಗಂಟೆಗಳಿಂದ ರಸ್ತೆಯಲ್ಲೇ ನಿಂತಿರುವ ವಾಹನಗಳು
ಮಡಿಕೇರಿ: ಕುಂಬಳದಾಳು-ಮೂರ್ನಾಡು ರಸ್ತೆಗೆ ಅಡ್ಡಲಾಗಿ ಮರಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ತೋಟದ ಬದಿಯಲ್ಲಿದ್ದ ಬೃಹತ್ ಮರವೊಂದು ನಿನ್ನೆ ರಾತ್ರಿ ಬಿದ್ದಿದ್ದು,ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ರಸ್ತೆಯಲ್ಲಿ ನೇತಾಡುತ್ತಿವೆ. ಇದೀಗ ಕಳೆದ ಎರಡು ಗಂಟೆಗಳಿಂದ ಶಾಲಾ-ವಾಹನ ಹಾಗೂ KSRTC ಬಸ್ಸ್ ರಸ್ತೆಯಲ್ಲಿ ನಿಂತಿದೆ. ಆದರೆ ಇದುವರೆಗೆ ಮರ ತೆರವುಗೊಳಿಸುವ ಕಾರ್ಯಕ್ಕೆ ಯಾರೂ ಕೂಡ ಮುಂದಾಗಿಲ್ಲ.
