ಹುಲಿ ಕಾರಿಡಾರ್‌ ರಕ್ಷಣೆಗೆ ತನಿಖೆಗಾಗಿ ಮಾರ್ಗಸೂಚಿ: ಯದುವೀರ್ ಒಡೆಯರ್

ಹುಲಿ ಕಾರಿಡಾರ್‌ ರಕ್ಷಣೆಗೆ ತನಿಖೆಗಾಗಿ ಮಾರ್ಗಸೂಚಿ: ಯದುವೀರ್ ಒಡೆಯರ್

ದೆಹಲಿ:ಕರ್ನಾಟಕದಲ್ಲಿ ದೀರ್ಘಕಾಲಿನ ಹುಲಿ ಆವಾಸಸ್ಥಾನ ಬಲಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಂಸದ ಯದುವೀರ್‌ ತಿಳಿಸಿದ್ದಾರೆ. ಸಂಸತ್‌ ಅಧಿವೇಶನದಲ್ಲಿ ಸಂಸದ ಯದುವೀರ್‌ ಈ ಕುರಿತು ಕೇಂದ್ರ ಅರಣ್ಯ ಸಚಿವರಿಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಈ ಉತ್ತರ ನೀಡಲಾಗಿದೆ.

 ಮಹದೇಶ್ವರ ಬೆಟ್ಟಗಳ ಅಭಯಾರಣ್ಯದಲಿ ಕಾಡು ಪ್ರಾಣಿಗಳ ಸಾವು, ವನ್ಯಜೀವಿ, ವಿಧಿ ವಿಜ್ಞಾನ, ವಿಷಶಾಸ್ತ್ರದ ಬಗ್ಗೆ ಮಾರ್ಗಸೂಚಿಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಕೋರಲಾಗಿತ್ತು ಎಂದು ಸಂಸದರು ವಿವರಿಸಿದ್ದಾರೆ. ಪ್ರಾಜೆಕ್ಟ್‌ ಟೈಗರ್‌ ಯೋಜನೆಯಡಿಯಲ್ಲಿ ಹುಲಿ ಮೀಸಲು ಪ್ರದೇಶಗಳಲ್ಲಿ ಆವಾಸಸ್ಥಾನ ರಕ್ಷಣೆ, ಜಾಗೃತಿ, ಸಮುದಾಯ ಜಾಗರೂಕತೆಗೆ ಹೆಚ್ಚಿನ ಹಣ ಒದಗಿಸಲಾಗುತ್ತಿದೆ ಎಂದು ಯದುವೀರ್‌ ತಿಳಿಸಿದ್ದಾರೆ.