ಕಾಗಿನೆಲೆ ಮಹಾಸಂಸ್ಥಾನ ಕುರುಬ ಸಮುದಾಯದ ನೂತನ ವಿದ್ಯಾರ್ಥಿ ನಿಲಯ: ಮುಖ್ಯಮಂತ್ರಿ ಗಳೊಂದಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಭೂಮಿಪೂಜೆ, ಸನ್ಮಾನ

ಕಾಗಿನೆಲೆ ಮಹಾಸಂಸ್ಥಾನ ಕುರುಬ ಸಮುದಾಯದ ನೂತನ ವಿದ್ಯಾರ್ಥಿ ನಿಲಯ: ಮುಖ್ಯಮಂತ್ರಿ ಗಳೊಂದಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ  ಭೂಮಿಪೂಜೆ, ಸನ್ಮಾನ

ಬೆಂಗಳೂರು: ಗಾಂಧಿನಗರದ ಕನಕದಾಸ ವೃತ್ತ, ಕಾಳಿದಾಸ ರಸ್ತೆ ಪಕ್ಕದಲ್ಲಿನ ನಿವೇಶನದಲ್ಲಿ ನೂತನವಾಗಿ ಬಹುಮಹಡಿಗಳ ಕಟ್ಟಡ ನಿರ್ಮಿಸಲಿರುವ ಪ್ರಯುಕ್ತ, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಈಶ್ವರನಂದ ಸ್ವಾಮೀಜಿ ರವರು, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಿಣಿ ಬ್ರಿಡ್ಜ್ ಕಲಬುರಗಿ ಶಾಖಾ ಮಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ರವರದಿವ್ಯ ಉಪಸ್ಥಿತಿಯಲ್ಲಿ ಕುರುಬ ಸಮಾಜದ ನೂತನ ವಿದ್ಯಾರ್ಥಿನಿಲಯಕ್ಕೆ ಹಮ್ಮಿಕೊಳ್ಳಲಾಗಿದ್ದ, "ಶಂಕುಸ್ಥಾಪನಾ" ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೊಂದಿಗೆ ಭಾಗಿಯಾಗಿದರು .

ಭೂಮಿ ಪೂಜೆ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್‌ ರವರು,ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆವರು ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷರಾದ ಎಚ್ ಎಮ್ ರೇವಣ್ಣ, ಮಾಜಿ ಸಚಿವರಾದ ವರ್ತೂರು ಪ್ರಕಾಶ್ ರವರು, ಮಾಜಿ ಸಚಿವರಾದ ಬಂಡೆಪ್ಪ ಖಾಶೇಂಪುರ್ ರವರು, ಮಾಜಿ ವಿಧಾನ ಪರಿಷತ್ ಸಭಾಧಿಪತಿ ಗಳಾದ ರಘುನಾಥರಾವ್ ಮಲ್ಕಾಪುರೆ ರವರು, ಬ್ಯಾಡಗಿ ಶಾಸಕರಾದ ಬಸವರಾಜ್ ಶಿವಣ್ಣನವರ್ ರವರು, ಕಡೂರು ಶಾಸಕರಾದ ಕೆ.ಎಸ್.ಆನಂದ್ ರವರು, ಹನೂರು ಶಾಸಕರಾದ ಮಂಜುನಾಥ್ ರವರು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿರವರು, ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣ್ ಚಿಂಗಲಿ ರವರು,ಹಲವು ಪ್ರಮುಖ ಮಾಜಿ ಶಾಸಕರುಗಳು, ಹಾಲಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.