ರಾಜ್ಯ ಅರಣ್ಯ ಇಲಾಖೆ ಘಟಕಗಳ ದಿನಗೂಲಿ ಹೊರಗುತ್ತಿಗೆ ‌ನೌಕರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ

ರಾಜ್ಯ ಅರಣ್ಯ ಇಲಾಖೆ ಘಟಕಗಳ ದಿನಗೂಲಿ ಹೊರಗುತ್ತಿಗೆ ‌ನೌಕರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ

ಬೆಂಗಳೂರು,ನ18: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘ ಹಾಗೂ ಪ್ರಾದೇಶಿಕ ಸಂಶೋಧನೆ ಸಾಮಾಜಿಕ ಕರ್ನಾಟಕ ಅರಣ್ಯ ಅಭಿವೃದ್ಧಿ ಒಳಗೊಂಡಂತೆ ಸಂಘವು ಎರಡು ದಿನಗಳಿಂದ ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಮುಷ್ಕರ ನಿರತರ ಬೇಡಿಕೆಗಳನ್ನು ಸರ್ಕಾರವು ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಸೂಚನೆ ಮೇರೆಗೆ ಭೇಟಿ ನೀಡಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ನೇತೃತ್ವದ ನಮ್ಮ ಕರ್ನಾಟಕ ಸರ್ಕಾರ ಬಡವರ ಪರವಾಗಿ ದೀನ ದಲಿತರ, ಕಾರ್ಮಿಕರ,ರೈತರ ಪರವಾದ ಸರ್ಕಾರ. ಖಂಡಿತವಾಗಿಯೂ ನಿಮ್ಮ ಬೇಡಿಕೆಗಳು ಈಡೇರಲಿದೆ. ಪ್ರಮುಖ ಮೂರು ಬೇಡಿಕೆಗಳಾದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ದಿನಗೂಲಿ ನೌಕರರನ್ನು ಖಾಯಂ ಗಳಿಸುವುದು . ಹೊರಗುತ್ತಿಗೆಯನ್ನು ರದ್ದು ಪಡಿಸುವುದು, ದಿನಗೂಲಿ ಸೇವಾ ಅವಧಿ,ಸೇವಾ ಹಿರಿತನ ವನ್ಯಜೀವಿ ಘಟಕಗಳಲ್ಲಿ ಈ ಪಿಎಫ್, ಇ ಎಸ್ ಐ ಸಮರ್ಪಕವಾಗಿ ನಿರ್ವಹಣೆ, ವಿಮಾಸೌಲಭ್ಯಗಳು. ಹೊರಗುತ್ತಿಗೆ ಮತ್ತು ಭದ್ರತೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರೊಂದಿಗೆ ಸಮಾಲೋಚಿಸಿ ನಾನು ಪ್ರಾಮಾಣಿಕವಾಗಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಆದುದರಿಂದ ಮುಷ್ಕರವನ್ನು ಕೈ ಬಿಡುವಂತೆ ವಿನಂತಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘ ಹಾಗೂ ಪ್ರಾದೇಶಿಕ ಸಂಶೋಧನೆ ಸಾಮಾಜಿಕ ಕರ್ನಾಟಕ ಅರಣ್ಯ ಅಭಿವೃದ್ಧಿ ಒಳಗೊಂಡಂತೆ ಗೌರವ ಅಧ್ಯಕ್ಷರಾದ ಶ್ರೀ ಎ ಎಂ ನಾಗರಾಜ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.