ಅಪ್ರಾಪ್ತ ಯುವಕರಿಂದ ದ್ವಿಚಕ್ರ ವಾಹನದಲ್ಲಿ ತ್ರಿಪಲ್ ರೈಡ್: ಪೋಷಕರಿಗೆ ಬಿತ್ತು ದಂಡ

ಮಂಗಳೂರು: ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಸಂಚಾರ ಮಾಡುತ್ತಿದ್ದ ಮೂವರು ಅಪ್ರಾಪ್ತರನ್ನು ಪತ್ತೆಹಚ್ಚಿ ಪ್ರಕರಣದಲ್ಲಿ ನ್ಯಾಯಾಲಯವು ಪೋಷಕರಿಗೆ ಬೃಹತ್ ಮೊತ್ತದ ದಂಡ ವಿಧಿಸಿರುವ ಘಟನೆ ಸೆ.3ರಂದು ವರದಿಯಾಗಿದೆ. ಬಜ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸಿಬ್ಬಂದಿಯೊಂದಿಗೆ ಆ.28ರಂದು ಸಾಯಂಕಾಲ 6:35 ಗಂಟೆಯ ಸಮಯಕ್ಕೆ ಬಜ್ಪೆ ಪೇಟೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಒಂದು ದ್ವಿಚಕ್ರವಾಹನದಲ್ಲಿ ಮೂವರು ಅಪ್ರಾಪ್ತರು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪೋಷಕರು ದ್ವಿಚಕ್ರವಾಹನ ನೀಡಿರುವುದು ದೃಢಪಟ್ಟಿದೆ. 199ಎ, 194ಸಿ, 194ಡಿ 130 ಜೊತೆಗೆ 177 ಐಎಮ್‌ವಿ ಕಾಯ್ದೆಯಡಿಯಲ್ಲಿ ದೋಷರೋಪಣ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಪೋಷಕರಿಗೆ 27,500 ರೂ. ದಂಡ ವಿಧಿಸಿ ಸೆ.3ರಂದು ತೀರ್ಪು ನೀಡಿದೆ.