ಮಿಸ್ಟಿ ಹಿಲ್ಸ್, ಎಸ್.ವಿ.ವೈ.ಎಂ. ನಿಂದ ಸೈನಿಕಶಾಲೆ ಸೇಪ೯ಡೆ ತರಬೇತಿ ಕಾಯಾ೯ಗಾರಕ್ಕೆ ಚಾಲನೆ

ಮಿಸ್ಟಿ ಹಿಲ್ಸ್,  ಎಸ್.ವಿ.ವೈ.ಎಂ. ನಿಂದ ಸೈನಿಕಶಾಲೆ ಸೇಪ೯ಡೆ ತರಬೇತಿ ಕಾಯಾ೯ಗಾರಕ್ಕೆ ಚಾಲನೆ

ಮಡಿಕೇರಿ ನ.3: ರೋಟರಿ ಮಿಸ್ಟಿ ಹಿಲ್ಸ್ ಮತ್ತು ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಸೈನಿಕಶಾಲೆ ಸೇರಲಿಚ್ಚಿಸುವ ವಿದ್ಯಾಥಿ೯ಗಳಿಗೆ ಶೈಕ್ಷಣಿಕ ತರಬೇತಿ ಕಾಯಾ೯ಗಾರಕ್ಕೆ ಚಾಲನೆ ದೊರಕಿತು.

 ನಗರದ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ತರಬೇತಿ ಕಾಯಾ೯ಗಾರವನ್ನು ಉದ್ಘಾಟಿಸಿ ಮಾತನಾಡಿದ,ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ, ಸೈನಿಕ ಶಾಲೆ ಎಂಬುದು ಕೇವಲ ಶಿಕ್ಷಣದ ಕೇಂದ್ರವಲ್ಲ ಅದು ಶಿಸ್ತು, ದೇಶಭಕ್ತಿ, ನಾಯಕತ್ವ ಮತ್ತು ನಂಬಿಕೆಯ ಪಾಠಗಳನ್ನು ಕಲಿಸುವ ಪುಣ್ಯಸ್ಥಳ. ಸೈನಿಕಶಾಲೆಯಲ್ಲಿ ಕಲಿಯುವ ಮಕ್ಕಳು ನಾಳೆಯ ಭಾರತದ ಭದ್ರ ಕೈಗಳು, ದೇಶದ ಹೆಮ್ಮೆಯಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಶಿಬಿರ ಕೇವಲ ಪರೀಕ್ಷೆಗೆ ತಯಾರಿ ಮಾತ್ರವಲ್ಲ ಇದು ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವ ವೇದಿಕೆ. ನಮ್ಮ ದೇಶದ ಶಕ್ತಿ, ದೇಶ ಸೇವೆ ಮಾಡಲು ಕನಸು ಕಾಣುವ ಯುವಕ , ಯುವತಿಯರಲ್ಲಿದೆ ಎಂದೂ ಜೀವನ್ ಅಭಿಪ್ರಾಯಪಟ್ಟರು. ಸೈನಿಕ ಶಾಲೆಗೆ ಸೇರಲು ಇಚ್ಛೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಕಾಯಾ೯ಗಾರದ ಮೂಲಕ ಮಹತ್ವದ ಹೆಜ್ಜೆ ಹಾಕಿದ್ದೀರಿ. ಸೈನಿಕಶಾಲೆಗೆ ಸೇಪ೯ಡೆಯಾಗುವ ವಿದ್ಯಾಥಿ೯ಗಳ ಕನಸಿಗೆ ಶ್ರಮ ಮತ್ತು ಸಮಯ ನೀಡುತ್ತಿರುವುದು ಪ್ರಶಂಸನೀಯ. ಇಂಥ ಕಾರ್ಯಾಗಾರವನ್ನು ಆಯೋಜಿಸಿರುವ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ ಶ್ಲಾಘನೀಯ ಕಾಯ೯ ಕೈಗೊಂಡಿದೆ ಎಂದು ಜೀವನ್ ಅಭಿನಂದಿಸಿದರು.

 ಕಾಯ೯ಕ್ರಮದಲ್ಲಿ ಏರ್ ಕಮೋಡರ್ ಜೈಸಿಂಹ  ಭಾರತೀಯ ವಾಯು ಪಡೆಗಳ ಮಹತ್ವ ಮತ್ತು ಈ ಸೇನಾ ಪಡೆಗಳಿಗೆ ಸೇಪ೯ಡೆ ಸಂಬಂಧಿತ ಮಾಹಿತಿ ನೀಡಿದರು. ಸರಗೂರು ಸೈನಿಕ ಶಾಲೆಯ ಆಡಳಿತ ಮಂಡಳಿ ಪ್ರಮುಖ ಪ್ರವೀಣ್ ಮಾತನಾಡಿ, ಸೈನಿಕ ಶಾಲಾ ಸೇಪ೯ಡೆಯ ಪರೀಕ್ಷೆಗೆ ಯಾವೆಲ್ಲಾ ರೀತಿ ತಯಾರಿ ಕೈಗೊಳ್ಳಬೇಕೆಂದು ತಿಳಿಸಿದರು.

ಕುನಾಲ್ ಕಡ್ತರೆ ಮತ್ತು ಪ್ರವೀಣ್ ಕಡ್ತರೆ ಗಣಿತ ಮತ್ತು ಸಾಮಾಜಿಕ ಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾಥಿ೯ಗಳಿಗೆ ಮಾಹಿತಿ ನೀಡಿದರು. ಕಾಯ೯ಕ್ರಮ ಸಂಚಾಲಕ ರೋಟರಿ ಮಿಸ್ಟಿ ಹಿಲ್ಸ್ ನ ಡಾ. ಚೆರಿಯಮನೆ ಪ್ರಶಾಂತ್ ಮಾಹಿತಿ ನೀಡಿ, ಸೈನಿಕ ಶಾಲೆಗೆ ಸೇರಲಿಚ್ಚಿಸುವ ವಿದ್ಯಾಥಿ೯ಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮುಂದಿನ 10 ಭಾನುವಾರಗಳಂದು ಈ ತರಬೇತಿ ಮಾಹಿತಿ ಕಾಯಾ೯ಗಾರ ಆಯೋಜಿಸಲ್ಪಟ್ಟಿದೆ.

ಪ್ರಸ್ತುತ ಜಿಲ್ಲೆಯಾದ್ಯಂತಲಿನ 15 ವಿದ್ಯಾಥಿ೯ಗಳು ಶಿಬಿರಕ್ಕ ನೋಂದಾಯಿಸಲ್ಪಟ್ಟಿದ್ದು ಆಸಕ್ತ ವಿದ್ಯಾಥಿ೯ಗಳಿಗೆ ಇನ್ನೂ ಅವಕಾಶ ಕಲ್ಪಿಸಲಾಗಿದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ನಿದೇ೯ಶಕರಾದ ಬಿ.ಕೆ. ರವಿಂದ್ರ ರೈ, ಪ್ರಸಾದ್ ಗೌಡ, ಪ್ರಕಾಶ್ ಪೂವಯ್ಯ, ಪಿ.ವಿ. ಅಶೋಕ್ ಹಾಜರಿದ್ದರು.

 ಸೈನಿಕಶಾಲೆಗೆ ಸೇಪ೯ಡೆ - ಅಜಿ೯ ಸಲ್ಲಿಕೆಗೆ ನ.9 ಕೊನೇ ದಿನ. .. ಸೈನಿಕಶಾಲೆಗಳಿಗೆ 6 ಮತ್ತು 9 ನೇ ತರಗತಿಗೆ ಸೇಪ೯ಡೆ ಸಂಬಂದಿತ ಅಜಿ೯ ಸಲ್ಲಿಸಲು ನವಂಬರ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ . ಅ 30 ಕೊನೆಗೊಂಡಿದ್ದ ಅಜಿ೯ ಸಲ್ಲಿಕೆ ದಿನಾಂಕವನ್ನು ಇದೀಗ ನ.9 ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯ ವಿದ್ಯಾಥಿ೯ಗಳು ಸೈನಿಕ ಶಾಲೆ ಸೇಪ೯ಡೆ ನಿಟ್ಟಿನಲ್ಲಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೋಟರಿ ಮಿಸ್ಟಿ ಹಿಲ್ಸ್, ಎಸ್.ವಿ.ವೈ.ಎಂ. ಪ್ರಮುಖರು ಮನವಿ ಮಾಡಿದ್ದಾರೆ.