ದೇಶದಲ್ಲೇ ನಮ್ಮದೇ ಗ್ಯಾರಂಟಿ ಸರ್ಕಾರ:ಮಲ್ಲಿಕಾರ್ಜುನ ಖರ್ಗೆ

ದೇಶದಲ್ಲೇ ನಮ್ಮದೇ ಗ್ಯಾರಂಟಿ ಸರ್ಕಾರ:ಮಲ್ಲಿಕಾರ್ಜುನ ಖರ್ಗೆ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದ ಉದ್ಘಾಟನೆ

ಮೈಸೂರು: ಬಿಜೆಪಿಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿಲ್ಲ. ದೇಶದಲ್ಲಿ ನಮ್ಮ ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮನಸ್ಸು ಗೆದ್ದಿವೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರೂ ಆಗಿರುವ ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಜಿಲ್ಲಾಡಳಿತದಿಂದ ಆಯೋಜಿಸಿದ್ದ ವಿವಿಧ ಇಲಾಖೆಗಳ ವಿವಿಧ ಇಲಾಖೆಗಳ 2578.03 ಕೋಟಿ ಮೌಲ್ಯದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

 ಬಿಜೆಪಿಯವರು ನಮ್ಮ ರಾಜ್ಯ ಸರ್ಕಾರದ ಮೇಲೆ ದುಡ್ಡಿಲ್ಲ, ದಿವಾಳಿಯಾಗಿದೆ ಎನ್ನುತ್ತಿದ್ದಾರೆ. ಸರ್ಕಾರ ದಿವಾಳಿ ಎದ್ದಿಲ್ಲ. ಈಗ ಪ್ರತಿ ಶಾಸಕರ ಕ್ಷೇತ್ರಾಭಿವೃದ್ಧಿಗೂ 50ಕೋಟಿ ರೂ. ಕೊಡುತ್ತಿದ್ದಾರೆ. ಹಾಗೊಂದು ವೇಳೆ ಕೇವಲ ಘೋಷಣೆ ಮಾತ್ರವಾದರೆ ಸಿಎಂ, ಡಿಸಿಎಂ ಇಬ್ಬರೂ ಮಾರ್ಯಾದೆ ಕಳೆದುಕೊಳ್ಳುತ್ತಾರೆ. ಸಿಎಂ ಸಿದ್ದರಾಮಯ್ಯ ಯಾವಾಗ ಆರ್ಥಿಕ ಸಚಿವಾಗುತ್ತಾರೋ ಆಗೆಲ್ಲಾ ಸರ್ಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತದೆ. ಇಲ್ಲಿಯಾರೊಬ್ಬರಿಂದ ಗ್ಯಾರಂಟಿ ಯಶಸ್ವಿಯಾಗಿಲ್ಲ. ಸಾಮೂಹಿಕ ನಾಯಕತ್ವ ಕಾಂಗ್ರೆಸ್ ಮಾಡಿದೆ. ಸಿಎಂ, ಡಿಸಿಎಂ ಸೇರಿ ಇಡೀ ಸರ್ಕಾರ ಎಲ್ಲರೂ ಒಗ್ಗೂಡಿದ ಮೇಲೆ ಜನರ ಕಲ್ಯಾಣ ಸಹ ಆಗುತ್ತಿದೆ ಎಂದರು. ಅಸ್ಸಾಂ, ಮಧ್ಯಪ್ರದೇಶ, ಗುಜರಾತ್ ಎಲ್ಲೂ ಕೂಡ ಬಿಜೆಪಿ ಗ್ಯಾರಂಟಿಗಳು ಯಶಸ್ವಿಯಾಗಿಲ್ಲ. ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಆದಂತೆ ಎಲ್ಲಿಯೂ ಆಗಿಲ್ಲ. ಮೋದಿಯವರೇ ಬಂದೂ ನಮ್ಮ ಗ್ಯಾರಂಟಿ ತಲುಪಿದಿಯೋ ಇಲ್ಲವೋ ನೋಡಿ. ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ನರೇಗಾ ಅನುದಾನ, ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಅನುದಾನ ಕೊಡಿ. ನಮ್ಮ ರಾಜ್ಯದಿಂದ ಕೋಟ್ಯಾಂತರ ರೂ. ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಈ ಪೈಕಿ ಶೇ.4ರಷ್ಟು ಮಾತ್ರ ನಮಗೆ ಬರುತ್ತಿದೆ. ರಾಜ್ಯದ ಪಾಲಿನ ಅನುದಾನ ನೀಡಿ ಎಂದರು.

 ಮೈಸೂರಿನ ಮೇಲೆ ಸಿಎಂ ಪ್ರೀತಿ:

ಮೈಸೂರು ನಗರದಲ್ಲಿ ಹಲವಾರು ಯೋಜನೆಗಳನ್ನು ಒಗ್ಗೂಡಿಸಿ ವಿವಿಧ ಇಲಾಖೆಯ ಅನುದಾನಗಳಿಗೂ ಚಾಲನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಯಾವುದೇ ಯೋಜನೆ ಬಂದರೂ ಮೊದಲ ಪ್ರಾತಿನಿದ್ಯ ಕೊಡುವುದು ಮೈಸೂರಿಗೆ ಯಾಕೆಂದರೆ ಅವರಿಗೆ ಮೈಸೂರಿನ ಮೇಲೆ ಹೆಚ್ಚು ಪ್ರೀತಿ.‌ ನಾನು ಅಧಿಕಾರದಲ್ಲಿ ಇರುವವರೆಗೂ ಹೆಚ್ಚು ಕೊಡಬೇಕೆಂದು ಹೇಳುತ್ತಾರೆ. ಇದು ನಿಮ್ಮೆಲ್ಲರ ಸುದೈವ ಆಗಿದೆ. ಬಿಜೆಪಿ ಯಾವ ಕೆಲಸವನ್ನು ಸಹ‌ಮಾಡದೇ ಬರೀ ಟೀಕೆ ಮಾಡುತ್ತಾರೆ. ಬಿಜೆಪಿಯವರಿಗೆ ಟೀಕೆ ಮಾಡುವುದೊಂದೆ ಗೊತ್ತು. ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ ಎಂದರು. ಪ್ರಧಾನಿ ನರೇಂದ್ರಮೋದಿಯವರು ಪಚ್ ಪನ್ ಸಾಲನೇ ಕಾಂಗ್ರೆಸ್ ಕ್ಯಾಕಿಯಾ ಎನ್ನುತ್ತಾರೆ. ನಾವು ಎನೂ ಮಾಡಿದ್ದೇವೆಂದು ಜನ ನೋಡಿದ್ದು, ಜನರ ಕಣ್ಣಮುಂದಿದೆ. ಪಂಡಿತ್ ಜವಹರಲಾಲ್ ಕಾಲದಲ್ಲಿ ಎಚ್ ಎಂಟಿ‌ ಸೇರಿ ಅನೇಕ ಉದ್ಯಮಗಳನ್ನು ರಾಜ್ಯಕ್ಕೆ ತಂದುಕೊಟ್ಟರು. ನಂತರ ಮಹಾರಾಜರ ಅವಧಿಯಲ್ಲಿ ಹೊರದೇಶದ ಉದ್ಯಮಗಳು ಪ್ರಾರಂಭಗೊಂಡವು. ಮೋದಿಯವರ ಶಿಷ್ಯರೇ ಮೈಸೂರು, ಬೆಂಗಳೂರು, ರಾಜ್ಯಕ್ಕೆ ನಿಮ್ಮ ಕೊಡುಗೆ ನಿಮ್ಮ ಹೇಳಿ ಎಂದರು. ಈಗಿನ ಪ್ರಧಾನಿಯವರು ಒಂದು ದಿನವೂ ಟಿವಿಯಲ್ಲಿ ಇಲ್ಲದೆ ಇಲ್ಲ. ಹಿಂದಿನ ಪ್ರಧಾನಿಗಳು ಯಾರು ಸಹ ಮಾದ್ಯಮದ ಎದುರು ಬರುತ್ತಿರಲಿಲ್ಲ. ಬೊಗಳುತ್ತಾ ಇರಲಿಲ್ಲವೆಂದರು. ಮಣಿಪುರಂ‌ ಭಾಗದಲ್ಲಿ ಅತ್ಯಾಚಾರ, ಎರಡು ಸಮುದಾಯಗಳ ನಡುವೆ ಜಗಳ ಆಗುತ್ತಿದೆ. ಮನೆ ಸುಟ್ಟಿ ಆಸ್ತಿ ಹಾನಿಯಾಗುತ್ತಿದೆ. ದೇವರ ಸರ್ಕಾರ ಆಗಲಿ, ಬಿಜೆಪಿ ಸರ್ಕಾರ ಎನೂ ಮಾಡಿಲ್ಲ. ಇದುವರೆವಿಗೂ 42ದೇಶಕ್ಕೆ ಹೋದ ಪ್ರಧಾನಿ ಪಕ್ಕದ ಮಣಿಪುರಂಗೆ ಹೋಗಿಲ್ಲ. ಒಂದು ದಿನವೂ ಹೋಗಿ ಜನರಿಗೆ ಸಮಾಧಾನ ಮಾಡಲಿಲ್ಲ ಕಾರಣ ಎನೂ?. ರಾಹುಲ್ ಗಾಂಧಿ ಎರಡು ಬಾರಿ ಹೋದರು. ಮಣಿಪುರದಿಂದಲೇ ಎರಡನೇ ಪಾದಯಾತ್ರೆ ಹೋದರೂ. ಇವರು ವಿದೇಶದಲ್ಲಿ ಟೂರ್ ಮಾಡುತ್ತಾರೆಂದರು. ಮಹಾರಾಜರು, ನೆಹರು ಕಾಲದಲ್ಲಿ ಆದ ಅಭಿವೃದ್ಧಿ ಬಿಟ್ಟರೆ, ಈಗ ಅದಾನಿ, ಅಂಬಾನಿ ಕಾರ್ಖಾನೆಗಳು ಕಾರ್ಮಿಕರು ಬೀದಿಪಾಲು ಮಾಡುತ್ತಿರುವುದೇ ಕೇಂದ್ರದ ಸಾಧನೆ. ವಿಮಾನನಿಲ್ದಾಣ, ರಸ್ತೆ ಹೀಗೆ ಎಲ್ಲವನ್ನೂ ತಮಗೆ ಬೇಕಾದ ಜನರಿಗೆ ಕೊಡುತ್ತಿದೆ. ಸಂವಿಧಾನ ತಿದ್ದುಪಡಿ ತರಬೇಕೆಂದು ಬಿಜೆಪಿಯ ಮಕ್ಕಳಾದ ಆರ್ ಎಸ್‌ ಎಸ್ ಪ್ರಯತ್ನಿಸಿದ್ದಾರೆಂದರು. ಸಂವಿಧಾನ ಬದಲಾವಣೆಗೆ ನಾವು ಅವಕಾಶ ಮಾಡಿಕೊಡುವುದಿಲ್ಲ. ಸಂವಿಧಾನ ಬದಲಾದರೆ ಜನತೆ ಸತ್ತಂತೆ ಆಗಲಿದೆ. ಸಂವಿಧಾನದ ಕೊಲೆ ಇಂದು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಅನೇಕ ದೊಡ್ಡ, ಒಳ್ಳೆಯ ಕೆಲಸ‌ಮಾಡಿದೆ. ಆರ್ಥಿಕ‌ಶಕ್ತಿ ತುಂಬಿ, ಸಾಮಾಜಿಕ ನ್ಯಾಯ ನೀಡಿದೆ ಹೊರತು ಬೇರೆ ಯಾವುದೇ ಪಕ್ಷ ಮಾಡಿಲ್ಲ. ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ‌. ತನ್ನ ಮೂಲ ತತ್ವ ಬಿಡದೇ ಕೆಲಸ ಮಾಡುತ್ತಿದೆ. ಕೆಲವೆಡೆ ಸೋತಿದೆ ಜನ ದೇಶದಲ್ಲಿ ಜನ ಉಳಿಯಬೇಕು. ಆಸೆ ಕೋಟ್ಯಾಂತರ ಜನರು ಇದ್ದಾರೆ ಎಂದರು. ಈ ಬಾರಿ ಲೋಕಸಭೆಯಲ್ಲಿ ನಮಗೂ ಬಿಜೆಪಿಗೂ ಶೇ.2ರಷ್ಟು ವ್ಯತ್ಯಾಸ ಅಷ್ಟೇ ಆಗಿದೆ. ಕಾಂಗ್ರೆಸ್ ಮುಕ್ತ ಭಾರತ್ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಇನ್ನೂ 25 ಸೀಟ್ ಹೆಚ್ಚು ಬಂದಿದ್ದರೂ ನಮ್ಮ ಶಕ್ತಿ ಏನೆಂಬುದು ತೋರಿಸುತ್ತಿದ್ದೇವು. ಮೇಲೆ ಎದ್ದವರು ಕೆಳಗೆ ಬಿದ್ದೇ ಬೇಳಬೇಕು. ಬೆಟ್ಟ ಹತ್ತಿದವರು ಕೆಳಗೆ ಬರಲೇಬೇಕಿದೆ. ನಮ್ಮ ಪಕ್ಷ ದೇಶದ ಮೂಲೆ ಮೂಲೆಯಲ್ಲೂ ಇದೆ. ರಾಜ್ಯದಲ್ಲಿ ಒಳ್ಳೆ ಕೆಲಸ ನಡೆದಿದೆ. ಐದು ಗ್ಯಾರಂಟಿ ದೇಶದಲ್ಲಿ ವಿಶೇಷವಾಗಿದೆ. ಗ್ಯಾರಂಟಿ ಕೊಟ್ಟಿದ್ದನ್ನು ಅನುಷ್ಠಾನಕ್ಕೆ ತಂದಿದ್ದಾರೆ‌. ನಮ್ಮ‌ಪಕ್ಷದಲ್ಲಿ ಕೆಲಸ ಮಾಡುವವರು ಇದ್ದಾರೆ. ಅವರಲ್ಲಿ ಮಾತನಾಡುವವರು ಇದ್ದಾರೆಂದರು. ಪ್ರಾಮಾಣಿಕವಾಗಿ ಗ್ಯಾರಂಟಿ ಯೋಜನೆ ಜನರನ್ನು ಮುಟ್ಟಿವೆಯೇ ಇಲ್ಲವೇ ನೀವೇ ಹೇಳಿ. ಮುಟ್ಟಿದ್ದರೆ ನಮ್ಮನ್ನು ಹೋಗಳಬೇಕೋ ತೆಗಳಬೇಕೋ ನೀವೇ ಹೇಳಿ. ಇಂದಿರಾಗಾಂಧಿ ಅವಧಿಯಲ್ಲಿಯೂ 10ಅಂಶ ಹಾಗೂ 20ಅಂಶದ ಕಾರ್ಯಕ್ರಮ ನೀಡಿದರು. ಜಮೀನ್ದಾರುಗಳಿಂದ ಭೂಮಿ ಪಡೆದು ಉಳುವವನೇ ಭೂಮಿಯ ಒಡೆಯನಾಗಿ ಮಾಡಿದರು. ಇದಕ್ಕಾಗಿ ಜಮೀನ್ದಾರುಗಳು ಇಂದಿರಾಗಾಂಧಿಯನ್ನು ಬೈಯುತ್ತಿದ್ದರು. ಇಂತಹದೊಂದು ಜನಪರ ಕೆಲಸ ಮೋದಿಯವರು ತೋರಿಸಲಿ. ಯುಪಿ, ಬಿಹಾರನಲ್ಲಿ ಯಾಕೆ ಅನುಷ್ಠಾನ ಮಾಡಿಲ್ಲ. ದೇಶ ಉದ್ದಾರ ಆಗಬೇಕಾದರೆ ದೊಡ್ಡ ಕಾರ್ಖಾನೆ, ಬಂಡವಾಳಶಾಹಿಗಳು ಬರಬೇಕಿದೆ. ಸಿದ್ದರಾಮಯ್ಯ, ಶಿವಕುಮಾರ್ ತಮಗೋಸ್ಕರ ಗ್ಯಾರಂಟಿ ತಂದಿಲ್ಲ. ಸಾಮಾನ್ಯ ಜನರಿಗೋಸ್ಕರ ಮಾಡಿ ಬೈಸಿಕೊಳ್ಳುತ್ತಿದ್ದಾರೆ. ನಮ್ಮ ಯೋಜನೆಯನ್ನು ಹಳ್ಳಿಗೆ ತಲುಪಿಸಿ ಅವರ ಸುಖ-ದುಖ ಕೇಳಿ. ಯಾವ ಪಕ್ಷದವರಾದರೂ ಜನರ ಅಭಿಪ್ರಾಯ ಕೇಳಿ ಎಂದರು. ಕರ್ನಾಟಕದತ್ತ ಬಾರದ ಕೈಗಾರಿಕೆಗಳು ಆಂಧ್ರಕಡೆಗೆ ಹೋಗುತ್ತಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ, ಅನೇಕ ಉದ್ಯಮಿಗಳು ಕರ್ನಾಟಕ ಹುಡುಕಿ ಬರುತ್ತಿದ್ದಾರೆ. ಕೆಲವರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದ್ದು ಹೊಟ್ಟೆಕಿಚ್ಚಿನ ಸರ್ಕಾರ ಆಗಿದೆ. ಗ್ಯಾರಂಟಿ ಘೋಷಿಸಿದ್ದಕ್ಕೆ ಸುಳ್ಳಾಡಿದರೂ, ಅಸತ್ಯ ನುಡಿದರೂ ಎನ್ನುತ್ತಾರೆ. ಕಾಂಗ್ರೆಸ್‌ ಶಕ್ತಿ ಬಂದಾಗ ಅಭಿವೃದ್ಧಿ ಮಾಡುತ್ತೇವೆಂದರು.

ಮೋದಿ, ಗಡ್ಕರಿ ವಿಭಿನ್ನ ನಡೆ

 ಪ್ರಧಾನಿ ನರೇಂದ್ರಮೋದಿ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶದ ಜತೆಗೆ ಹೋಗುತ್ತಿದೆ ಎನ್ನುತ್ತಾರೆ. ಮತ್ತೊಂದೆಡೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ನಮ್ಮ ದೇಶದಲ್ಲಿ ಇನ್ನೂ ಅಸಮಾನತೆ, ಬಡತನ ಇದೆ ಎನ್ನುತ್ತಿದ್ದಾರೆ. ಹೀಗಾಗಿ ಮೋದಿ ಸುಳ್ಳೋ ಅಥವಾ ಗಡ್ಕರಿ ಸುಳ್ಳೋ ಜನರೇ ತೀರ್ಮಾನಿಸಬೇಕಿದೆ. ಒಟ್ಟಾರೆ ಬಿಜೆಪಿಯೇ ಸುಳ್ಳಾಗಿದೆ. ನಮ್ಮದು ಹೊಟ್ಟೆ ತುಂಬಿಸುವ, ಬೆಳಕು ನೀಡುವ ಗ್ಯಾರಂಟಿ ನಮ್ಮದಾಗಿದೆ. ದೇಶದ ಶೇ.1ರಷ್ಟು ಮಂದಿ ಕೈಯಲ್ಲಿ ಶೇ.40ರಷ್ಟು ಹಣ ಇದೆ. ಶೇ.50 ಮಂದಿ 6.4 ರಷ್ಟು ಹಣವಿದೆ.‌ ಹೀಗಾಗಿ ರಾಜ್ಯದ ಜನತೆ ಗ್ಯಾರಂಟಿಯಿಂದ ಬದುಕಿದ್ದಾರೆ, ಹೊರತಾಗಿ ಮೋದಿಯವರ ಸುಳ್ಳು ಭರವಸೆಯಿಂದ ಜನ ಬದುಕಿಲ್ಲ. ಪ್ರಧಾನಿ ನರೇಂದ್ರಮೋದಿಯವರದು ನಂಬರ್‌ ಒನ್‌ ಸುಳ್ಳಾಗಿದೆ. ಕಾಂಗ್ರೆಸ್‌ ಪಕ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಮೂರು ಮಂತ್ರದೊಂದಿಗೆ ಮುಂದೆ ಹೋಗುತ್ತಿದ್ದೇವೆ. ದೇಶದ ಜನರನ್ನು ಉಳಿಸುವುದಕ್ಕೆ ಮುಂದೆ ಹೋಗುತ್ತಿದ್ದೇವೆಂದರು.