ಗಯಾನದಿಂದ ಕೊಡಗಿನ ಗಿರೀಶ್ ಮೃತದೇಹ ತಾಯ್ನಾಡಿಗೆ ತರಲು, ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಕೆ

ಮಡಿಕೇರಿ: ತಾಲ್ಲೂಕಿನ ಮದೆನಾಟು ಗ್ರಾಮ ಪಿ.ಪಿ ಗಿರೀಶ್ ಕಳೆದ ಎರಡುವರೆ ವರ್ಷಗಳಿಂದ ದಕ್ಷಿಣ ಅಮೆರಿಕದ ಗಯಾನದ ಜಾರ್ಜ್ ಟೌನ್ ನ ಪನಾಮ ಎಂಬಲ್ಲಿ ಖಾಸಗಿ ಆರೋಗ್ಯ ಸಂಸ್ಥೆಯೊಂದರಲ್ಲಿ ನರ್ಸಿಂಗ್ ಉದ್ಯೋಗಿಯಾಗಿದ್ದನು. ಆದರೆ ಹೃದಯ ಸಮಸ್ಯೆ, ಪಾರ್ಶ್ವವಾಯು ಕಾಣಿಸಿಕೊಂಡು ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಕೋಮ ಸ್ಥಿತಿಯಲ್ಲಿ ಇತ್ತೀಚಿಗೆ ಸಾವನ್ನಪ್ಪಿದರು.
ಇದೀಗ ದಿವಂಗತ ಶ್ರೀ ಪಿ.ಬಿ. ಗಿರೀಶ್ ನ ಪ್ರಾರ್ಥಿವ ಶರೀರವನ್ನು ವಿದೇಶದಿಂದ ಮರಳಿ ತಾಯ್ನಾಡಿಗೆ ತರಲು ಸುಮಾರು 12 ಲಕ್ಷಗಳು ಬೇಕಾಗಿರುತ್ತದೆ. ಇಷ್ಟು ಮೊತ್ತದ ಹಣವನ್ನು ಬರಿಸುವಷ್ಟು ಗಿರೀಶನ ಕುಟುಂಬವು ಶಕ್ತರಾಗಿಲ್ಲದ ಕಾರಣ, ಇಂದಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ತಂಡದ ಕಡೆಯಿಂದ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾದ ಶ್ರೀಯುತ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಮಾಡಿ ವಿನಂತಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಕೆ.ಎಸ್.ಪೊನ್ನಣ್ಣ ನವರು ಸಕಾರಾತ್ಮಕವಾಗಿ ಸ್ಪಂದಿಸಿ, ಮುಖ್ಯಮಂತ್ರಿಗಳ ಮತ್ತು ಶಾಸಕರ ನಿಧಿಯಿಂದ ಮೃತ ದೇಹವನ್ನು ತಾಯ್ನಾಡಿಗೆ ಮರಳಿ ತರಲು ಭರವಸೆಯನ್ನು ನೀಡಿದ್ದಾರೆ.ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ತಂಡ ಮಾಹಿತಿ ನೀಡಿದ್ದಾರೆ.