ರಸ್ತೆ ವಿಭಜಕಕ್ಕೆ SWIFT ಕಾರು ಡಿಕ್ಕಿ: ಇಬ್ಬರು ಯುವಕರು ಸಾವು

ರಸ್ತೆ ವಿಭಜಕಕ್ಕೆ SWIFT ಕಾರು ಡಿಕ್ಕಿ: ಇಬ್ಬರು ಯುವಕರು ಸಾವು
ಅಪಘಾತದಲ್ಲಿ ಮೃತಪಟ್ಟ ಯುವಕರು

ಹಾಸನ: ರಸ್ತೆ ವಿಭಜಕಕ್ಕೆ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಸಮೀಪ ನಡೆದಿದೆ. ಶನಿವಾರ ರಾತ್ರಿ ಕೊಣನೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ರಾಜ್ಯ ಹೆದ್ದಾರಿಯಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ದರ್ಶನ್ (25) ಮತ್ತು ರಂಗನಾಥ ಪ್ರಸಾದ್ (22) ಮೃತರು. ಕೊಣನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.