ಹುಣಸೂರಿನಲ್ಲಿ ಸುಂಟಿಕೊಪ್ಪ ಮೂಲದ ಉದ್ಯಮಿಯ ಕಾರು ಅಪಘಾತ
ಹುಣಸೂರು: ಸುಂಟಿಕೊಪ್ಪ ನಿವಾಸಿ ಹಾಗೂ ಉದ್ಯಮಿ ಆಸಿಫ್ ಪಿ. ಕೆ ಅವರು ಪ್ರಯಾಣಿಸುತ್ತಿದ್ದ ಬೆನ್ಸ್ ಕಾರು ಹಾಗೂ ಮಹೇಂದ್ರ ಬೊಲೇರೋ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಇಂದು ಮುಂಜಾನೆ ಸುಮಾರು 5:30 ಗಂಟೆಗೆ ಸುಂಟಿಕೊಪ್ಪದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ವೇಳೆ ಹುಣಸೂರು ಸಮೀಪದ ಬಿಳಿಕೆರೆ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದ್ದು,ಅಪಘಾತದಿಂದಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
