ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾರದ ನಿತಿನ್ ಗಡ್ಕರಿ ಭೇಟಿಯಾದ ಯದುವೀರ್ ಒಡೆಯರ್: ಮೈಸೂರು-ಕುಶಾಲನಗರ ರಸ್ತೆ ಕಾಮಗಾರಿಯ ಬಗ್ಗೆ ಚರ್ಚೆ

ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾರದ ನಿತಿನ್ ಗಡ್ಕರಿ ಭೇಟಿಯಾದ ಯದುವೀರ್ ಒಡೆಯರ್:  ಮೈಸೂರು-ಕುಶಾಲನಗರ ರಸ್ತೆ ಕಾಮಗಾರಿಯ ಬಗ್ಗೆ ಚರ್ಚೆ

ದೆಹಲಿ:ಇಂದು ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ ಬಹು ಬೇಡಿಕೆಯ ಮೈಸೂರು-ಕುಶಾಲನಗರ ರಸ್ತೆ ಕಾಮಗಾರಿಯ ಪ್ರಸ್ತುತ ಸ್ಥಿತಿಯ ಬಗ್ಗೆ ಸುದೀರ್ಘವಾಗಿ ಕೊಡಗು-ಮೈಸೂರು ಸಂಸದರಾದ ಯದುವೀರ್ ಒಡೆಯರ್ ಚರ್ಚಿಸಿದರು. ಮತ್ತು ಈ ಪ್ಯಾಕೆಜ್-2 ಯೋಜನೆಯಲ್ಲಿ ಉಂಟಾಗುತ್ತಿರುವ ಅರಣ್ಯ ಒತ್ತುವರಿ ಮತ್ತು ಭೂಸ್ವಾದೀನ ಪ್ರಕ್ರಿಯೆಯ ವಿಳಂಬಗಳನ್ನು ತಪ್ಪಿಸಲು ತಮ್ಮ ಹಸ್ತಕ್ಷೇಪವನ್ನು ವಹಿಸಬೇಕು ಹಾಗೂ ಶೀಘ್ರವಾಗಿ ಈ ಯೋಜನೆಗೆ ಚಾಲನೆ ನೀಡುವ ನಿಗದಿತ ದಿನಾಂಕ ಘೋಷಿಸಲು ಮನವಿ ಮಾಡಿದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಯೋಜನೆಯ ತ್ವರಿತ ಪ್ರಗತಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.