ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕ ಸಾವು

ಕೊಣನೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕ ಮೃತಪಟ್ಟಿದ್ದು ರೀಲ್ಸ್ ಮಾಡುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅರಕಲಗೂಡು ತಾಲ್ಲೂಕಿನ ವಿ.ಜಿ. ಕೊಪ್ಪಲು ಗ್ರಾಮದ ಕಿರಣ್‌ಕುಮಾರ್ ಮೃತ ಯುವಕ. ಕೊಣನೂರು ಹೋಬಳಿ ಕಬ್ಬಳಿಗೆರೆ ಬೆಟ್ಟದ ಮೇಲೆ ಬುಧವಾರ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ರೀಲ್ಸ್ ಮಾಡಲೆಂದು ಬೆಟ್ಟಕ್ಕೆ ಬಂದಿದ್ದರು. ಏಕಾಏಕಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಯುವಕರು ಘಟನೆಯಿಂದ ಹೆದರಿ ಓಡಿಹೋಗಿದ್ದಾರೆಂದು ಸ್ಥಳೀಯರು ಹೇಳಿದರು. ಕೊಣನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.