ಆ.17 ರಂದು “ಸ್ಟಡಿ ಅಬ್ರಾಡ್ EXPO-2025” ಕಾರ್ಯಕ್ರಮ

ಆ.17 ರಂದು “ಸ್ಟಡಿ ಅಬ್ರಾಡ್ EXPO-2025” ಕಾರ್ಯಕ್ರಮ

ಮಡಿಕೇರಿ(Coorgdaily): ಕರ್ನಾಟಕದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಾರದರ್ಶಕ, ಮೌಲ್ಯಾಧಾರಿತ ಮತ್ತು ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ನೀಡುವ ಮೂಲಕ ಜಾಗತಿಕ ಶಿಕ್ಷಣದ ಪ್ರಯಾಣವನ್ನು ಸರಳೀಕರಿಸಲು ಮತ್ತು ಸುರಕ್ಷಿತಗೊಳಿಸಲು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ “ಸ್ಟಡಿ ಅಬ್ರಾಡ್ ಎಕ್ಸ್‍ಪೋ-2025” ಕಾರ್ಯಕ್ರಮವು ಆಗಸ್ಟ್, 17 ರಂದು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆಯಲಿದೆ.

40 ಕ್ಕೂ ಹೆಚ್ಚಿನ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ವಿದೇಶಿ ಸಂಸ್ಥೆಗಳಲ್ಲಿ ಪದವಿ ಪೂರ್ವ, ಸ್ನಾತಕೋತ್ತರ, ಡಿಪ್ಲೋಮಾ ಅಥವಾ ವೃತ್ತಿಪರ ಕೋರ್ಸ್‍ಗಳನ್ನು ಮುಂದುವರೆಸಲು ಆಸಕ್ತಿಯಿರುವವರು ಎಕ್ಸ್‍ಪೋ-2025ರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಜಿಲ್ಲೆಯಾದ್ಯಾಂತ ಎಲ್ಲಾ ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡೆಯಬುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 12 ರೊಳಗೆ ಈ http:studyabroad.ksdckarnataka.com/ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಲು ತಿಳಿಸಿದೆ. ಈವೆಂಟ್ ಹೈಲೈಟ್: ವಿಶ್ವವಿದ್ಯಾನಿಲಯ ಪ್ರವೇಶ ಮಾರ್ಗದರ್ಶನ, ವಿಶ್ವವಿದ್ಯಾನಿಲಯ ವಿದ್ಯಾರ್ಥಿ ವೇತನ ಶೇ.50 ವರೆಗೆ ಸ್ಪಾಟ್ ವಿದ್ಯಾರ್ಥಿ ವೇತನ ಮೌಲ್ಯಮಾಪನ, ವಿದ್ಯಾರ್ಥಿ ವೀಸಾ ಕುರಿತು ವಿಚಾರ ಸಂಕೀರ್ಣಗಳು, ಸ್ಪಾಟ್ ಅಸೆಸ್ಮೆಂಟ್ ಮತ್ತು ಅರ್ಹತಾ ಪರಿಶೀಲನೆ, ಉಚಿತ ವಿಮಾನ ಟಿಕೇಟ್, ಭಾಷಾ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅವರು ತಿಳಿಸಿದ್ದಾರೆ.