ನಗರೀಕರಣದ ಹೆಸರಲ್ಲಿ ಪರಿಸರ ಮಾರಣಹೋಮ ಸರಿಯೇ..?
ನಗರೀಕರಣದ ಹೆಸರಲ್ಲಿ ಪರಿಸರ ಮಾರಣಹೋಮ ಸರಿಯೇ..?
ಮಾನವನು ಸಾಮೂಹಿಕ ಜೀವಿ ಮತ್ತು ಪರಿಸರ ಜೀವಿಯಾಗಿದೆ.ನಮ್ಮ ಮತ್ತು ಪರಿಸರದ ನಡುವೆ ಒಂದು ಅಭೇಧ್ಯವಾದ ಸಂಭದವಿದೆ.ಪ್ರಾಚೀನ ಕಾಲದಿಂದಲೇ ಮಾನವನು ತನ್ನ ಕೆಲಸಗಳಿಗೆ ಬೇರೆ ಬೇರೆ ರೂಪದಲ್ಲಿ ಪ್ರಾಣಿಗಳನ್ನು, ಪಕ್ಷಿಗಳನ್ನು ಒಟ್ಟಾರೆಯಾಗಿ ಜೀವ ಸಂಕುಲವನ್ನು ಅವಲಂಬಿಸಿಕೊಳ್ಳುತ್ತಾ ಬಂದಿದೆ.
ಆದರೆ ದುರಾದೃಷ್ಟಕರವೆಂದರೆ ಇತ್ತೀಚಿಗೆ ಈ ಪರಿಸರ ಮಾತೆಯ ಹೃದಯಕ್ಕೆ ಕೊಡಲಿ ಏಟು ನೀಡುವ ಕೆಲಸವನ್ನು ಮಾನವನು ಮಾಡುತ್ತಾ ಬರುತ್ತಿದ್ದಾನೆ. ಅದಕ್ಕೆ ಸೂಕ್ತ ನಿದರ್ಶನವೆಂದರೆ ಇತ್ತೀಚೆಗೆ ತೆಲಂಗಾಣದ ಸರ್ಕಾರವು ನಡೆಸಿದ ಪರಿಸರದ ಮಾರಣಹೋಮವಾಗಿದೆ.ತೆಲಂಗಾಣದಲ್ಲಿ ನಡೆಯುತ್ತಿರುವ ಅರಣ್ಯ ನಾಶದ ಮುಖ್ಯ ಕಾರಣ ಮನುಷ್ಯನ ದುರಾಸೆಯಾಗಿದೆ. ಕಾಡನ್ನೇ ನಂಬಿ ಕುಟುಂಬ ಕಟ್ಟಿಕೊಂಡ ಅದೆಷ್ಟೋ ಜೀವಿಗಳ ಸಂಸಾರಗಳು ಇಂದು ದಿಕ್ಕು ಪಾಲಾಗಿ ಓಡಿ ಹೋಗುತ್ತಿವೆ. ಒಂದು ಕಡೆ ಮರಗಳ ಮಾರಣಹೋಮ ನಡೆಯುತ್ತಿದ್ದರೆ ಮತ್ತೊಂದೆಡೆ ಪ್ರಾಣಿ- ಪಕ್ಷಿಗಳ ಆಕ್ರಂದನ ಮುಗಿಲುಮುಟ್ಟಿವೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಅತಿ ಅತಿವೃಷ್ಟಿಯು ಸಮಾಜಕ್ಕೆ ಯಾವ ರೀತಿ ಸಂದೇಶ ನೀಡುತ್ತದೆ ಎಂಬುದು ಗೊತ್ತಾಗುತ್ತಿಲ್ಲ.
ಇತ್ತೀಚಿಗೆ ಅಂದರೆ ಮಾರ್ಚ್ 30ರ ಭಾನುವಾರದಂದು ಹೈದರಾಬಾದ್ ವಿಶ್ವವಿದ್ಯಾನಿಲಯ ಸಮೀಪದ ಗಚಿಚೌಲಿಯಲ್ಲಿನ ಕಾಂಚ್ ಅರಣ್ಯ ಪ್ರದೇಶವಾದ ಸುಮಾರು 400 ಎಕರೆ ಯ ಅಪರೂಪದ ಜೀವ ವೈವಿಧ್ಯತೆಯ ಜೀವತಾಣಕ್ಕೆ ಮಿಶ್ರ ಅಭಿವೃದ್ಧಿಯ ಮತ್ತು ಐಟಿ ಅಭಿವೃದ್ಧಿಯ ಹೆಸರಿನಲ್ಲಿ ತೆಲಂಗಾಣ ಕೈಗಾರಿಕಾ ಮೂಲ ಸೌಕರ್ಯ ನಿಗಮವು ಏಕಾಏಕಿ ರಾತ್ರಿ ಜೆಸಿಬಿಗಳನ್ನು ಪ್ರವೇಶ ಮಾಡುವುದರ ಮೂಲಕ ದಾಳಿ ಮಾಡಿದರು.5ಲಕ್ಷ ಉದ್ಯೋಗ ಮತ್ತು ಐವತ್ತು ಸಾವಿರ ಕೋಟಿಗಳ ಬಂಡವಾಳವನ್ನು ಹೊಂದಿರುವ ಯೋಜನೆಯಾಗಿತ್ತು.ಆದರೆ ಆ ಅರಣ್ಯದಲ್ಲಿ ವಿವಿಧ ಜಾತಿಯ 734ಹುಲಿಗಳು,10 ಜಾತಿಯ ಸಸ್ತನಿಗಳು, 15 ಪ್ರೀತಿಯ ಸರಿ ಸ್ತೃಪಗಳು, 220 ಜಾತಿಯ ಪಕ್ಷಿಗಳು ಮತ್ತು ಲಕ್ಷಾಂತರ ಪ್ರಾಣಿ ಸಂಕುಲಗಳು ವಾಸವಾಗಿದ್ದವು.ತಮ್ಮ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳನ್ನು ಬಲಿಕೊಟ್ಟ ತೆಲಂಗಾಣ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಮತ್ತು ಪರಿಸರ ಸ್ನೇಹಿಗಳು ಪ್ರತಿಭಟನೆ ನಡೆಸಲಾರಂಭಿಸಿದಾಗ ಸರ್ಕಾರದ ಆದೇಶವನ್ನು ಪಾಲಿಸಲು ಕಟುಬದ್ಧರಾದ ಪೊಲೀಸ್ ಅಧಿಕಾರಿಗಳು ಪ್ರತಿಭಟನಕಾರರನ್ನು ಬಂದಿಸಿದರು. ಆದರೆ ಏಕಾಏಕಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಇದರ ವಿರುದ್ಧ ನೇರ ಪ್ರವೇಶ ಮಾಡಿ,ಸುಪ್ರೀಂ ಕೋರ್ಟ್ ಸರ್ಕಾರದ ವಿರುದ್ಧ ಸುಮೋಟೋ ಕೇಸ್ ದಾಖಲೆ ಮಾಡಿ ಸರ್ಕಾರಕ್ಕೆ ಛೀಮಾರಿ ಹಾಕಿದರು.ಮಾತ್ರವಲ್ಲ ಅದೆಷ್ಟು ಪರಿಸರ ಪ್ರೇಮಿಗಳು ಪರಿಸರ ಸಂಘಟನೆಗಳು ಸರ್ಕಾರದ ಈ ನಡತೆಯನ್ನು ಖಂಡಿಸಿ ಅರಣ್ಯ ಪ್ರದೇಶವನ್ನು **ಸಂರಕ್ಷಿತ ಪ್ರದೇಶ* ವೆಂದು ಘೋಷಣೆ ಮಾಡಬೇಕೆಂಬ ಬೇಡಿಕೆ ಸರ್ಕಾರದ ಮುಂದೆಯಿಟ್ಟಿದಾರೆ.ಇದರ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಂಶೋಧಕ ಅರುಣ್ ವಾಸಿಮ್ ರೆಡ್ಡಿರವರು ಈ ಅರಣ್ಯ ನಾಶದಿಂದ ಅಲ್ಲಿನ ತಾಪಮಾನ ಸುಮಾರು 1 ರಿಂದ 4ಕ್ಕೆ ಹೆಚ್ಚಾಗಲಿದೆ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಅರಿತು ಬದುಕೋಣ,ಮುಂದೊಂದು ದಿನ ನಮ್ಮ ಮುಂದಿನ ತಲೆಮಾರು ಆಕ್ಸಿಜನ್ ಸಿಲಿಂಡರ್ ಮತ್ತು ಕೃತಕ ವಾಯುವನ್ನು ಪಡೆಯುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳೋಣ. ಉಸಿರು ನೀಡಿದ ಹಸಿರನ್ನು ನಾವು ನಾಶ ಮಾಡುವ ನೀಚ ಕೆಲಸವನ್ನು ಮಾಡಬಾರದು.ಪರಿಸರಕ್ಕೆ ಸದಾ ಸಮಯದಲ್ಲೂ ಕೃತಜ್ಞತೆಯನ್ನು ಸಲ್ಲಿಸುತ್ತಾ ಜೀವಿಸೋಣ.
ಹಸಿರೇ ಹಸಿರು...
ಬರಹ: ಆಶಿಕ್ ನಲ್ವತ್ತೆಕರೆ,ಕೊಡಗು
(ವಿದ್ಯಾರ್ಥಿ, ಶಂಸುಲ್ ಉಲಮಾ ಅರೆಬಿಕ್ ಕಾಲೇಜು , ತೋಡಾರು)