ಬಿದ್ದು ಸಿಕ್ಕಿದ್ದ 5ಲಕ್ಷ ಮೌಲ್ಯದ ಗೋಲ್ಡನ್ ವಾಚ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಎಎಸ್ ಐ ಪೆಮ್ಮಯ್ಯ

ಬಿದ್ದು ಸಿಕ್ಕಿದ್ದ 5ಲಕ್ಷ ಮೌಲ್ಯದ ಗೋಲ್ಡನ್ ವಾಚ್  ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಎಎಸ್ ಐ ಪೆಮ್ಮಯ್ಯ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ಕೊಡಗಿನ ಪವಿತ್ರ ಸ್ಥಳ ಭಾಗಮಂಡಲದ ತಲಕಾವೇರಿಯಲ್ಲಿ ಭತ್ತರೊಬ್ಬರ ಕಳೆದು ಹೋಗಿದ್ದ ಬೆಲೆಬಾಳುವ ಗೋಲ್ಡನ್ ವಾಚ್ ಹಿಂತಿರುಗಿಸಿ ಎಎಸ್ಐ ಪೆಮ್ಮೆಯ್ಯ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಚೆನ್ನೈ ಮೂಲದ ನಿವಾಸಿ ಜಯ ಪಾರ್ವತಿ ಎಂಬುವವರು ಕಾವೇರಿಯ ಉಗಮ ಸ್ಥಾನ ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ತಮ್ಮ 5 ಲಕ್ಷ ರೂ ಬೆಲೆ ಬೆಲೆಬಾಳುವ ಗೋಲ್ಡನ್ ವಾಚ್ ಕಳೆದುಕೊಂಡಿದ್ದರು. ಈ ಬೆಲೆಬಾಳುವ ವಾಚ್ ಭಾಗಮಂಡಲ ಠಾಣೆಯ ಎಎಸ್‌ಐ ಎಂ.ಬಿ.ಪೆಮ್ಮಯ್ಯರವರಿಗೆ ಸಿಕ್ಕಿದ್ದು ಇದನ್ನು ಮಾಲೀಕರಾದ ಜಯ ಪಾರ್ವತಿರವರಿಗೆ ಮರಳಿಸುವ ಮೂಲಕ ಎ ಎಸ್ ಐ ಎಂ.ಬಿ.ಪೆಮ್ಮಯ್ಯ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.