ಬಿರುನಾಣಿಯಲ್ಲಿ ಹಿಂದೂ ಸಂಗಮದ ಬ್ಯಾನರ್ ಬಂಟಿಂಗ್ಸ್ ತೆರವುಗೊಳಿಸಿದ ಕಿಡಿಗೇಡಿಗಳು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

Feb 21, 2026 - 11:41
Feb 21, 2026 - 11:47
 0  1.4k

ಪೊನ್ನಂಪೇಟೆ;,ದಕ್ಷಿಣ ಕೊಡಗಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ಸಂಗಮದ ಬ್ಯಾನರ್ ಬಂಟಿಂಗ್ಸ್ ಅನ್ನು ಕಿಡಿಗೇಡಿಗಳು ತೆರವುಗೊಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಗಳು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಕಾರ್ಯಕರ್ತರ ಒತ್ತಾಯಿಸಿದ್ದಾರೆ. ಶುಕ್ರವಾರ ರಾತ್ರಿ ಯಾರೋ ಕಿಡಿಗೇಡಿಗಳು ಕಾರಿನಲ್ಲಿ ಬಂದು ಎಲ್ಲಾ ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಕಿತ್ತು ತೆರವುಗೊಳಿಸಿರುವ ಘಟನೆ ನಡೆದಿದೆ.

 ಈ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 23.02.2026ರ ಸೋಮವಾರದಂದು‌ ಬಿರುನಾಣಿಯಲ್ಲಿ ಹಿಂದೂ ಸಂಗಮ ಆಯೋಜಿಸಲಾಗಿದ್ದು , ಇದರ ಪೂರ್ವ ತಯಾರಿಯಾಗಿ ಶುಕ್ರವಾರ 20.02.2026ರಂದು ಬಿರುನಾಣಿ ಟೌನ್ ನಿಂದ ಮರೆನಾಡು ಕೊಡವ ಸಮಾಜದವರೆಗೆ ಕೇಸರಿ ಬಂಟಿಂಗ್ಗಳನ್ನು ಕಟ್ಟಲಾಗಿತ್ತು .

ಆದರೆ ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಎಲ್ಲಾ ಬಂಟಿಂಗ್ಸ್ ಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಇದೀಗ ಸಿಸಿಟಿವಿ ಪರೀಕ್ಷಿಸಿದ್ದು ಕಿಡಿಗೇಡಿಗಳು ತೆರುವುಳಿಸುವ ದೃಶ್ಯ ಸರೆಯಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಯಾರು ಈ ಕೃತ್ಯವನ್ನು ನಫೆಸಿದ್ದಾರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 2
Angry Angry 1
Sad Sad 1
Wow Wow 0