ಸೋಮವಾರಪೇಟೆ:ಎಂಟು ವರ್ಷಗಳ ಬಳಿಕ ಉದ್ಘಾಟನಾ ಭಾಗ್ಯ ಕಂಡ ಇಂದಿರಾ ಕ್ಯಾಂಟೀನ್
ಸೋಮವಾರಪೇಟೆ: ಇಲ್ಲಿನ ಇಂದಿರಾ ಕ್ಯಾಂಟೀನ್ ಎಂಟು ವರ್ಷಗಳ ಬಳಿಕ ಉದ್ಘಾಟನಾ ಭಾಗ್ಯ ಕಂಡಿದೆ.ಅಂತೂ,ಇಂತೂ ಸೋಮವಾರಪೇಟೆಯ ಜನತೆಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಸವಿಯುವ ಅವಕಾಶವನ್ನು ಡಾ ಮಂತರ್ ಗೌಡ ಅವರು ಮಾಡಿಕೊಟ್ಟಿದ್ದಾರೆ.ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಎ ಅವರು ಇಂದು ಸೋಮವಾರಪೇಟೆಯ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದರು.ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ ಸತೀಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ ಲೋಕೇಶ್, ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್,ಕೆಪಿಸಿಸಿ ಸದಸ್ಯ ಯಾಕುಬ್, ಪಟ್ಟಣ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸದಸ್ಯರು ಇದ್ದರು.
What's Your Reaction?






