ಮಾಲಂಬಿಯಲ್ಲಿ 20ನೇ ವರ್ಷದ ಗೌರಿ-ಗಣೇಶೋತ್ಸವ ಆಚರಣೆ

ಮಾಲಂಬಿಯಲ್ಲಿ 20ನೇ ವರ್ಷದ ಗೌರಿ-ಗಣೇಶೋತ್ಸವ ಆಚರಣೆ

ಶನಿವಾರಸಂತೆ: ಮಾಲಂಬಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 20ನೇ ವರ್ಷದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಪ್ರಯುಕ್ತ ಗ್ರಾಮದ ಮಕ್ಕಳಿಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ‌ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಮಾಚಾಯ್ಯ ಹಾಗೂ ಮಾದಪ್ಪ ಉದ್ಘಾಟನೆ ಮಾಡಿದರು. ಮಾಚಾಯ್ಯ ಮಾತನಾಡಿ ಇಂದು ಯುವ ಸಮೂಹ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಮರೆಯುತ್ತಿದ್ದಾರೆ ಅಂತಹದರಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊತ್ತಿರುವುದು ಸ್ಲಾಘನೀಯ ಎಂದರು.

ಮಾದಪ್ಪ ಮಾತನಾಡಿ ಇಂದು ಜಾತಿ ಧರ್ಮ ಎಂದು ಕಚ್ಚಡುತಿದ್ದೇವೆ ನಾವು ಬರುವಾಗ ಏನನ್ನು ತಂದಿಲ್ಲ ಹೋಗುವಾಗಲೂ ಏನನ್ನು ಕೊಂಡೋಯುವುದಿಲ್ಲ ಅಂತಹದತಲ್ಲಿ ದ್ವೇಷ ಅಸೂಯೆ ಏಕೆ ನಾವೆಲ್ಲ ಮನುಜರು ಒಗ್ಗಟಿನಿಂದ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹಕರಿಸೋಣ ಎಂದರು. ಪ್ರಮುಖರಾದ ಸುರೇಶ್ ಮಾತನಾಡಿ ದೇವಾಲಯದ ಕೆಲಸ ಸುಲಭದ ಕೆಲಸವಲ್ಲ ಒಂದು ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಲು ಅನೇಕ ಖರ್ಚು ವೆಚ್ಚಗಳಿದೆ ಸಮಿತಿಯವರು ಮನೆ ಬಾಗಿಲಿಗೆ ಬಂದಾಗ ಒಂದಷ್ಟು ಸಹಕಾರ ಮಾಡುವ ಮನಸ್ಥಿತಿ ಬರಬೇಕು ಎಂದರು. ಆಲೂರು ಸಿದ್ದಾಪುರ ರೋಟರಿ ಕ್ಲಬ್ ಸದಸ್ಯ ವೆಂಕಟೇಶ್ ಮಾತನಾಡಿ ಇಂದು ಮಾಲಂಬಿ ವಿನಾಯಕ ಸೇವಾ ಸಮಿತಿ ಸುಮಾರು 20ವರ್ಷಗಳಿಂದ ಯುವ ಸಮೂಹ ಸೇರಿಕೊಂಡು ಅದ್ದೂರಿಯಾಗಿ ಈ ಉತ್ಸವ ಮಾಡಿಕೊಂಡು ಬರುತ್ತಿದೆ ಆದರೆ ಅನೇಕರು ಸಹಾಯ ಮಾಡಲು ಹಿಂದೇಟು ಹಾಕುತಿದ್ದಾರೆ ನಾವೆಲ್ಲರೂ ಸಹಕಾರ ಮಾಡಬೇಕು, ಇದು ಕೇವಲ ಸೇವಾ ಸಮಿತಿಯಾ ಉತ್ಸವ ಅಲ್ಲಾ ಗ್ರಾಮದ ಉತ್ಸವ ಎಂದರು. ಕಾಫಿ ಬೆಳೆಗಾರ ಕೋಮರಪ್ಪ ಮಾತನಾಡಿ ಮುಂದಿನ ದಿನದಲ್ಲಿ ಈ ಗಣೇಶ ಗೌರಿ ಪ್ರತಿಷ್ಠಾಪನೆ ಮಾಡಲು ಒಂದು ಭವನ ನಿರ್ಮಾಣ ಮಾಡಿಕೊಡಲು ಈಗಾಗಲೇ ಸ್ಥಳೀಯ ಶಾಸಕರಿಗೆ ಮನವಿ ಮಾಡಲಾಗಿದೆ ಮುಂದಿನ ದಿನದಲ್ಲಿ ಅದು ಆಗಲಿದೆ ಎಂದರು. ಸೇವಾ ಸಮಿತಿ ಸದಸ್ಯ ಸುಂದರ್ ಮಾತನಾಡಿ ಅನೇಕರು ಸೇವಾ ಸಮಿತಿಗೆ ಮಾತ್ರ ಈ ಉತ್ಸವ ಸೀಮಿತವಾಗಿದೆ ಅಂದು ಕೊಂಡಿದ್ದಾರೆ ನಾವು ಪ್ರತಿ ಮನೆಗೆ ತೆರಳಿದಾಗ ಬರಿ ಕೈನಲ್ಲಿ ಕಳುಹಿಸುತ್ತಾರೆ ಆದರು ನಮ್ಮ ಸಮಿತಿ ದೃತಿ ಗೆಡದೆ ಕಾರ್ಯಕ್ರಮ ಮಾಡಲು ಮುಂದಾಗಿದೆ ಮುಂದಾದರು ಜನ ಬದಲಾವಣೆ ಆಗಬೇಕು, ಧನ ಸಹಾಯ ಮಾಡದಿದ್ದರೂ ಪೂಜಾ ಕಾರ್ಯಕ್ರಮಕ್ಕೆ ಬರಬೇಕು ಎಂದರು.

 ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಸುನಿಲ್ ವಹಿಸುದ್ದರು ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷ ಚೆನ್ನಕೇಶವ, ಮಾಜಿ ಅಧ್ಯಕ್ಷ ಲಿಂಗರಾಜು, ಗ್ರಾಮ ಸಮಿತಿ ಅಧ್ಯಕ್ಷ ಬೋಳನ ಮಹೇಶ್, ಆಲೂರು ಗ್ರಾಮ ಪಂಚಾಯತ್ ಸದಸ್ಯೆ ಮುತ್ತಮ್ಮ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ದೇವರಾಜ್ ಹಾಗೂ ಶ್ರೀ ವಿನಾಯಕ ಸೇವಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಮುಂತಾದವರಿದ್ದರು. ಸ್ಥಳೀಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ನೆರೆದಿದ್ದ ಸರ್ವರಿಗೂ ಅನ್ನ ಸಂತರ್ಪಣೆ ನಡೆಯಿತು.