ಕಾಲು ಜಾರಿ ಡ್ಯಾಂಗೆ ಬಿದ್ದು ಮೃತಪಟ್ಟ ವ್ಯಕ್ತಿ!

ಕಾಲು ಜಾರಿ ಡ್ಯಾಂಗೆ ಬಿದ್ದು ಮೃತಪಟ್ಟ ವ್ಯಕ್ತಿ!

ಚಾಮರಾಜನಗರ : ಕಾಲು ಜಾರಿ ಡ್ಯಾಂಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲ್ಲಯ್ಯನಪುರದ ಬಳಿ ಚೆಕ್ ಡ್ಯಾಂನಲ್ಲಿ ನಡೆದಿದೆ. ಕೌದಳ್ಳಿ ಗ್ರಾಮದ ಸಿದ್ದರಾಮಶೆಟ್ಟಿ(50) ಮೃತಪಟ್ಟ ವ್ಯಕ್ತಿ. ಸಿದ್ದರಾಮಶೆಟ್ಟಿ ಬಹಿರ್ದೆಸೆಗೆ ಮಲ್ಲಯ್ಯಪುರದ ಚೆಕ್‌ ಡ್ಯಾಂ ಬಳಿ ತೆರಳಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.