ಕುಶಾಲನಗರ: ಹೆಲ್ಮೆಟ್ ಧರಿಸಿಲ್ಲವೆಂದು ಪೋಲಿಸರನ್ನು ಕಂಡು ಬೈಕ್ ಯೂಟರ್ನ್ ತೆಗೆದ ವ್ಯಕ್ತಿ ಅಪಘಾತದಲ್ಲಿ ಮೃತ್ಯು; ಮಾನವೀಯತೆ ಮೆರೆದ ಮಟನ್ ಜಭಿವುಲ್ಲಾ

Feb 17, 2026 - 23:38
 0  4.5k
ಕುಶಾಲನಗರ: ಹೆಲ್ಮೆಟ್ ಧರಿಸಿಲ್ಲವೆಂದು ಪೋಲಿಸರನ್ನು ಕಂಡು ಬೈಕ್ ಯೂಟರ್ನ್ ತೆಗೆದ ವ್ಯಕ್ತಿ ಅಪಘಾತದಲ್ಲಿ ಮೃತ್ಯು;  ಮಾನವೀಯತೆ ಮೆರೆದ ಮಟನ್ ಜಭಿವುಲ್ಲಾ
ಸಾಂದರ್ಭಿಕ ಚಿತ್ರ

ಕುಶಾಲನಗರ; ರಸ್ತೆ ಮಧ್ಯದಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಬೈಕ್ ಗೆ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಸವಾರ ಹೆಬ್ಬಾಲೆಯ ಮರೂರು ಗ್ರಾಮದ ನಟೇಶ್ ಮೃತಪಟ್ಟಿದ್ದಾರೆ.

ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಗಾಯಗೊಂಡಿದ್ದಾರೆ.ಮಂಗಳವಾರ ಸಂಜೆ 6.50 ರ ಸಮಯದಲ್ಲಿ ಕೂಡುಮಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಸಮಾಜಸೇವಕ ಮಟನ್ ಜಭಿವುಲ್ಲಾರವರು ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಮಂಗಳವಾರ ಸಂಜೆ ಕೂಡುಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪ ಹೆದ್ದಾರಿಯಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಹೆಬ್ಬಾಲೆಯ ದಂಪತಿ ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಪತಿ ಮತ್ತು ಪತ್ನಿ ಬರುತ್ತಿದ್ದವರು ಪೊಲೀಸರನ್ನು ಕಂಡು ಬೆದರಿ ಇದ್ದಕ್ಕಿದ್ದಂತೆ ರಸ್ತೆ ಮಧ್ಯದಲ್ಲಿ ಬೈಕ್ ಅನ್ನು ಯೂಟರ್ನ್ ಮಾಡಲು ಯತ್ನಿಸಿದ್ದಾರೆ.

ಇದೇ ಸಂದರ್ಭ ಧಾವಿಸಿ ಬಂದ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಸವಾರ ಗಂಭಿರವಾಗಿ ಗಾಯಗೊಂಡು ಚಿಂತಾಜನಕರಾದರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಇವರ ಪತ್ನಿ ಗಾಯಗೊಂಡಿದ್ದರು.

 ಇದೇ ಸಂದರ್ಭ ಕೂಡಿಗೆ ಕಡೆಯಿಂದ ಜೀತೋ ಪಿಕ್ ಅಪ್ ವಾಹನದಲ್ಲಿ ಬರುತ್ತಿದ್ದ ಸಮಾಜಸೇವಕ ಮಟನ್ ಜಭಿವುಲ್ಲಾರವರು ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದರು.ಆದರೆ ಬೈಕ್ ಸವಾರ ಮೃತಪಟ್ಟಿದ್ದಾರೆ. ಜಬೀವುಲ್ಲಾ ಅವರ ಮಾನವೀಯತೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

What's Your Reaction?

Like Like 7
Dislike Dislike 1
Love Love 1
Funny Funny 0
Angry Angry 2
Sad Sad 13
Wow Wow 1