ಕಾಡಾನೆ ದಾಳಿಯಿಂದ ಗಾಯಗೊಂಡು,ವಿಶ್ರಾಂತಿ ಪಡೆಯುತ್ತಿರುವ ಹ್ಯಾರಿ ಪೊನ್ನಪ್ಪ ಅವರ ಆರೋಗ್ಯ ವಿಚಾರಿಸಿದ ಎಎಸ್ ಪೊನ್ನಣ್ಣ
ವಿರಾಜಪೇಟೆ: ಇತ್ತೀಚೆಗೆ ಕಾಡಾನೆ ದಾಳಿಯಿಂದ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿರುವ, ಕಾಂಗ್ರೆಸ್ ನಾಯಕ ಬಟ್ಟಕಾಳಂಡ ರಾಜ ದಿನೇಶ್ ರವರ ಸಹೋದರ ಅಪ್ಪಚಿರ ಹ್ಯಾರಿ ಪೊನ್ನಪ್ಪ ರವರನ್ನು, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
