ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ವರದಿ:ಝಕರಿಯ ನಾಪೋಕ್ಲು

ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 49ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಕಲ್ಯಾಟಂಡ.ಎ. ತಮ್ಮಯ್ಯನವರ ಅಧ್ಯಕ್ಷತೆ ವಹಿಸಿ ಮಾತನಾಡಿ,

ಸಂಘದಲ್ಲಿ ಒಟ್ಟು 19 ಕೋಟಿ 68 ಲಕ್ಷ ಬಂಡವಾಳ ಹೊಂದಿದ್ದು,ಸಂಘದ ಸದಸ್ಯರಿಗೆ ಕೆಸಿಸಿ ಸಾಲ,ಗೊಬ್ಬರ ಸಾಲ ಜಾಮೀನು ಸಾಲ, ಸ್ವಸಹಾಯ ಗುಂಪು ಸಾಲ,ನಿರಖು ಠೇವಣಿ ಸಾಲ, ಭವಿಷ್ಯ ಸಾಲ ಎಂದು ಒಟ್ಟಾಗಿ 10 ಕೋಟಿ 66 ಲಕ್ಷ ನೀಡಿದ್ದು, ಪ್ರಸಕ್ತ ಸಾಲಿನ ಸಂಘವು 23.09 ಲಕ್ಷ ರೂ ಲಾಭವನ್ನು ಹೊಂದಿದ್ದು, ಸದಸ್ಯರಿಗೆ 9% ಡಿವಿಡೆಂಟ್ ಹಂಚಲು ತೀರ್ಮಾನಿಸಿ ಲಾಭವಿಲೆವಾರಿಗೆ ಇಟ್ಟಿದ್ದು ಸದಸ್ಯರಿಗೆ 60 ಸಾವಿರದಂತೆ ಜಾಮೀನು ಸಾಲವನ್ನು ನೀಡುತ್ತಿದ್ದು ಮುಂದಕ್ಕೆ ಬಂಡವಾಳವನ್ನು ನೋಡಿ ಒಂದು ಲಕ್ಷ ರೂಪಾಯಿ ಜಾಮೀನು ಸಾಲವನ್ನು ನೀಡುತ್ತೆವೆ,ಸಂಘವು ಸತತವಾಗಿ ನಾಲ್ಕು ವರ್ಷದಿಂದ "ಎ" ಶ್ರೇಣಿಯಲ್ಲಿ ಮುಂದುವರೆಯುತ್ತಿದೆ ಎಂದ ಅವರು ಕೆಡಿಸಿಸಿ ಬ್ಯಾಂಕ್ ನ ಶಾಖೆಯು ಸಂಘದ ಕಟ್ಟಡದಲ್ಲಿ ತೆರೆಯುವುದರಿಂದ ಅದಕ್ಕೆ ಸಹಕರಿಸಿದ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರಿಗೂ,ಉಪಾಧ್ಯಕ್ಷರಿಗೂ ಹಾಗೂ ಆಡಳಿತ ಮಂಡಳಿಯವರಿಗೆ ಧನ್ಯವಾದ ಅರ್ಪಿಸಿದರು.

 ಸಂಘದಲ್ಲಿರುವ ಮರಣ ನಿಧಿಯನ್ನು 10ಸಾವಿರ ದಿಂದ 25ಸಾವಿರಕ್ಕೆ ಏರಿಸಿದ್ದು ಮರಣಾ ನಿಧಿ ಹಾಗೂ ಕರೆಯನ್ನು ಪೂರ್ತಿ ಮಾಡಬೇಕೆಂದು ಸದಸ್ಯರಲ್ಲಿ ಅಧ್ಯಕ್ಷರು ಕೇಳಿಕೊಂಡರು, ಸದಸ್ಯರ ಫ್ರೂಟ್ ಐಡಿ ಸರಿಯಾಗಿ ಇದ್ದಂತಹ ಸದಸ್ಯರಿಗೆ ಆನ್ಲೈನ್ ಪೋರ್ಟರ್ ನಲ್ಲಿ ಬಡ್ಡಿ ಕ್ಲೇಂ ಮಾಡ ಬೇಕಾಗಿರುವುದರಿಂದ ಆಧಾರ್ ಹಾಗೂ ಪಹಣಿಯನ್ನು ಸರಿಪಡಿಸಿ ಒಂದೇ ಹೆಸರು ಬರುವಂತೆ ಸರಿ ಮಾಡಿಕೊಳ್ಳಬೇಕೆಂದು ಹೇಳಿದರು.

ಇದೆ ಸಂದರ್ಭ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಮಂಜುಳಾ ರವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ನಂತರ ಅನುಮೋದನೆ ಪಡೆದುಕೊಂಡರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಅಲ್ಲಾರಂಡ ಅಯ್ಯಪ್ಪ, ನಿರ್ದೇಶಕರಾದ ಬಡಕಡ ಎಂ ಬೆಳ್ಯಪ್ಪ, ನಿಡುಮಂಡ ಹರೀಶ್ ಪೂವಯ್ಯ, ಕಲ್ಯಾಟಂಡ.ಎಂ.ಬೋಪಣ್ಣ, ಕೋಡಿಮಣಿಯಂಡ.ಎಂ.ನಾಣ ಯ್ಯ,ಪರದಂಡ.ಯು.ಕರುಂಬಯ್ಯ, ನಂಬಡಮಂಡ.ಬಿ.ಸುನಿತಾ,ಪರದಂಡ ಪ್ರಮೀಳಾ ಪೆಮ್ಮಯ್ಯ, ಎಎನ್ ಲಕ್ಷ್ಮಣ,ಪಿಟಿ ಕಾರ್ಯಪ್ಪ, ಕುಡಿಯರ ಅಚ್ಚಯ್ಯ,ಕೇಂದ್ರ ಬ್ಯಾಂಕಿನ ಮೇಲ್ವಿಚಾರಕರಾದ ನವೀನ್ ಕುಮಾರ್ ಎಚ್ ಟಿ, ಉಪಸ್ಥಿತರಿದ್ದರು. ಪ್ರಮೀಳಾ ಪೆಮ್ಮಯ್ಯ ಪ್ರಾರ್ಥಿಸಿ, ತಮ್ಮಯ್ಯ ಸ್ವಾಗತಿಸಿ,ಬೆಳ್ಯಪ್ಪ ಸರ್ವರನ್ನು ವಂದಿಸಿದರು.