ತೋಟಗಾರಿಕಾ ಬೆಳೆಗಾರರ ಗಮನಕ್ಕೆ

ಮಡಿಕೇರಿ:-ಪ್ರಸಕ್ತ (2025-26) ಸಾಲಿನಲ್ಲಿ ತೋಟಗಾರಿಗೆ ಇಲಾಖಾ ವತಿಯಿಂದ ಅಡಿಕೆ ಬೆಳೆಗೆ ಬಾದಿಸುವ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕ ಔಷಧಿಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್+ ಮ್ಯಾಂಕೇಜೆಜ್, ಕಾಪರ್ ಸಲ್ಪೇಟ್ (ಮೈಲುತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತಿ ಎಕರೆಗೆ ರೂ 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ ಗರಿಷ್ಟ 5 ಎಕರೆಗೆ 3 ಸಾವಿರ ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿದ ಜಿಎಸ್‍ಟಿ ಬಿಲ್ಲು. ಪಹಣೆ ಪತ್ರ (ಆರ್‍ಟಿಸಿ) ಆಧಾರ್ ಪ್ರತಿ ಬ್ಯಾಂಕ್ ಖಾತೆ ವಿವರಗಳನ್ನು ಜುಲೈ 31 ರೊಳಗೆ ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರು (ಜಿ.ಪಂ) ಮಡಿಕೇರಿ ರವರಿಗೆ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರು ತಿಳಿಸಿದ್ದಾರೆ.