ಡಿಕೆಶಿ ಸ್ವಾಗತಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ : ಮನೆಯಲ್ಲಿ ಕುಳಿತವರೆಲ್ಲರ ಹೆಸರು ಹೇಳಲು ಬರುವುದಿಲ್ಲ

ಮೈಸೂರು:ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಾಗತ ಭಾಷಣದ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಹೇಳಲಿಲ್ಲ. ಈ ಬಗ್ಗೆ ವೇದಿಕೆ ಮೇಲಿದ್ದ ವಕೀಲರೊಬ್ಬರು ಬಹಿರಂಗವಾಗಿಯೇ ಡಿಕೆಶಿ ಹೆಸರು ಹೇಳಿ ಸ್ವಾಗತಿಸಲು ತಿಳಿಸಿದರು. ಇದಕ್ಕೆ ಸಿಎಂ ಪ್ರತಿಕ್ರಯಿಸಿ ಡಿಕೆಶಿಯವರು ಆಗಲೇ ಹೋದರು. ಮನೆಯಲ್ಲಿ ಕುಳಿತವರೆಲ್ಲರ ಹೆಸರು ಹೇಳಲು ಬರುವುದಿಲ್ಲ. ನಿಮಗಿದು ತಿಳಿಯುವುದಿಲ್ಲವೆ ಎಂದು ಬಹಿರಂಗವಾಗಿಯೇ ಹೇಳಿದರು.