ಕೊಡಗಿನಲ್ಲಿ ಸಂಭ್ರಮದ ಕೈಲ್ ಪೊದ್ ಆಚರಣೆ

ಚೆಟ್ಟಳ್ಳಿ: ಕೈಲ್ ಪೊದ್ ನಮ್ಮೆಯನ್ನು ಕೊಡಗಿನ ಹಲವೆಡೆ ಸಾಂಪ್ರದಾಯಿಕವಾಗಿ ಅಚರಿಸಲಾಯಿತು.ಚೆಟ್ಟಳ್ಳಿಯಲ್ಲಿ ಪುತ್ತರಿರ ಕುಟುಂಬದವರೆಲ್ಲ ಐನ್ ಮನೆಯಲ್ಲಿ ಸೇರಿ ಸಾಂಪ್ರದಾಯಿಕವಾಗಿ ಆಯುಧ ಪೂಜೆಯನ್ನು ಮಾಡಲಾಯಿತು. ಕುಟುಂಬದ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯನವರು ನಡುಬಾಡೆಯಲ್ಲಿ ಮೀದಿನೀರಿಟ್ಟು ಪೂಜೆಸಲ್ಲಿಸಿ ಕೈಲ್ ಪೊಳ್ದ್ ನಮ್ಮೆಯ ಆಚರಣೆಮಾಡ ಲಾಗುತಿದ್ದು ಎಲ್ಲರಿಗೂ ಒಳಿತನ್ನು ಮಾಡಲೆಂಂದು ಬೇಡಿ ಕೊಂಡರು.
ಅದೇ ರೀತಿ ಹಿರಿಯರಾದ ಪುತ್ತರಿರ ಸುಜು ಬಿದ್ದಪ್ಪನವರು ಅಡುಗೆ ಮನೆಯಲ್ಲಿ ಮೀದಿ ನೀರಿಟ್ಟು ಬೇಡಿಕೊಂಡರು. ಹಬ್ಬದ ಅಂಗವಾಗಿ ಮಹಿಳೆಯರು ತಯಾರಿಸಿದ ವಿಶೇಷ ಕಡುಂಬುಟ್ಟು ,ಪಂದಿಕರಿ,ನೈಯಿಕೂಳ್,ಕೋಳಿಕರಿ,ಪಾಯಸ ಹೀಗೆ ಹಲವು ಬಗೆಯ ಖಾದ್ಯಗಳನ್ನು ಸವಿದರು. ಬೋಜನದ ಸವಿದನಂತರ ಕುಟುಂಬದವರೆಲ್ಲ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಶೌರ್ಯ ಪ್ರದರ್ಶಿಸ ಲಾಯಿತು.ನಂತರ ಊರಿನವರೆಲ್ಲ ಮಂದ್‌ನಲ್ಲಿ ಸೇರಿ ತೆಂಗಿನಕಾಯಿಗೆ ಗುಂಡುಹೊಡೆದರು.