ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ:ಭರವಸೆಗಳನ್ನು ಈಡೇರಿಸದಿರುವುದರ ಆಚರಣೆಯೆ? ಸಂಸದ ಯದುವೀರ್ ಒಡೆಯರ್

ಮೈಸೂರು:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿನಲ್ಲಿ ಒಂದು ಭವ್ಯ ಸಾಧನಾ ಸಮಾವೇಶವನ್ನು ಆಯೋಜಿಸುತ್ತಿದೆ, ಇದು ಯಾವುದೇ ಮೂಲಭೂತ ಅಂಶವಿಲ್ಲದೆ ಸ್ವಯಂ ಅಭಿನಂದನಾ ಕಾರ್ಯಕ್ರಮವಾಗಿದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಆರೋಪಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಆದರೆ ಅವರು ನಿಜವಾಗಿಯೂ ಇದನ್ನು ಆಚರಿಸುತ್ತಿರುವ ಉದ್ದೇಶವಾದರೂ ಏನು? ಇದು ರಾಜ್ಯದ ಆರ್ಥಿಕ ಕುಸಿತದ ಸಮಾರಂಭವೆ? ಭರವಸೆಗಳನ್ನು ಈಡೇರಿಸದಿರುವುದರ ಆಚರಣೆಯೆ? ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳು ಕುಸಿತದ ಸಮಾವೇಶವೆ? ಎಂದು ಯದುವೀರ್ ಒಡೆಯರ್ ಪ್ರಶ್ನಿಸಿದ್ದಾರೆ.