ಇಬ್ರಾಹಿಂ ಮಾಸ್ಟರ್ ಅವರನ್ನು ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ

ಸುಂಟ್ಟಿಕೊಪ್ಪ:ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಶಾಸಕರಾದ ಸುಂಟಿಕೊಪ್ಪದ ಇಬ್ರಾಹಿಂ ಮಾಸ್ಟರ್ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಿ. ಎ. ಹನೀಫ್ ಅವರು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಇಬ್ರಾಹಿಂ ಮಾಸ್ಟರ್ ಅವರು, ಜಿಲ್ಲಾ ವಖ್ಫ್ ಮಂಡಳಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನೆನ್ನೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಿದ್ದ ಮಹತ್ವವಾದ ಸಭೆ ಯಶಸ್ವಿಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಾರಣಾಂತರಗಳಿಂದ ತಮಗೆ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಇಬ್ರಾಹಿಂ ಮಾಸ್ಟರ್ ಅವರು ಅನಿಫ್ ಅವರಿಗೆ ತಿಳಿಸಿದರು. ಜಿಲ್ಲಾ ವಖ್ಫ್ ಮಂಡಳಿಗೆ ಅರ್ಹ ವ್ಯಕ್ತಿಯೊಬ್ಬರನ್ನು ಕೂಡಲೇ ನೇಮಿಸಬೇಕಾಗಿದೆ. ಈ ಕುರಿತು ಜಿಲ್ಲೆಯಲ್ಲಿ ಒಮ್ಮತ ಮೂಡಿ ಬರಬೇಕಾಗಿದೆ. ಅದಕ್ಕಾಗಿ ತಾನು ಸಂಬಂಧಿಸಿದವರಲ್ಲಿ ಮಾತುಕತೆ ನಡೆಸುವುದಾಗಿಯೂ ಇಬ್ರಾಹಿಂ ಮಾಸ್ಟರ್ ಅವರು ಹನೀಫ್ ಅವರಿಗೆ ತಿಳಿಸಿದರು.
ಇಬ್ರಾಹಿಂ ಮಾಸ್ಟರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೋಳುಮಂಡ ರಫೀಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾವ ನೆಲ್ಲಿಹುದಿಕೇರಿ, ಜುನೈದ್ ಮೊದಲಾದವರು ಇದ್ದರು.