ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬಿದ್ದು ಸಿಕ್ಕಿದ್ದ 3.50 ಲಕ್ಷ ರೂ ಮಾಂಗಲ್ಯ ಸರವನ್ನು ಮರಳಿಸಿದ ದಿವಾಕರ್

ಮಡಿಕೇರಿ:ಇತ್ತೀಚೆಗೆ ಹಾಕತ್ತೂರುವಿನ ನಿವಾಸಿ ಕಾರ್ಯಪ್ಪ ಹಾಗೂ ಪತ್ನಿ ಜಾನಕಿ ದಂಪತಿಗಳು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ತೆರಳಿದ ಸಂದರ್ಭ, ಜಾನಕಿ ಅವರ ಅಂದಾಜು 3.50 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರ ಆಸ್ಪತ್ರೆಯ ಆವರಣದಲ್ಲಿ ಕಳೆದು ಹೋಗಿತ್ತು. ಆಸ್ಪತ್ರೆಯ ಆವರಣ ಹಾಗೂ ವಾಹನದಲ್ಲೂ ಹುಡುಕಿದ್ರೂ ಕೂಡ ಸಿಗಲಿಲ್ಲ.ಇದೇ ಸಂದರ್ಭ ಆಸ್ಪತ್ರೆ ಗೆ ಪಿರಿಯಾಪಟ್ಟಣದಿಂದ ಬಂದಿದ್ದ ದಿವಾಕರ್ ಎಂಬವರಿಗೆ ಮಾಂಗಲ್ಯ ಸರ ಸಿಕ್ಕಿತ್ತು.
ಅವರು ಆಸ್ಪತೆ ಸಿಬ್ಬಂದಿಗೆ ನೀಡಿ ಕಳೆದುಕೊಂಡವರು ಯಾರಾದ್ರೂ ಬಂದ್ರೆ ಮಾಹಿತಿ ಪಡೆದು ವಾಪಾಸ್ ಅವರಿಗೆ ಮರಳಿಸುವಂತೆ ಆಸ್ಪತ್ರೆ ಸಿಬ್ಬಂದಿಗೆ ತಿಳಿಸುವಸಂದರ್ಭ ಅಲ್ಲಿಗೆಬಂದ ಕಾರ್ಯಪ್ಪ ದಂಪತಿಗಳಿಗೆ ಮಾಂಗಲ್ಯ ಸರವನ್ನು ವಾಪಾಸ್ ನೀಡಿದ ದಿವಾಕರ್ ಅವರಿಗೆ ಕಾರ್ಯಪ್ಪ ಅವರು ಕಿರು ಕಾಣಿಗೆ ನೀಡಲು ಮುಂದಾದಾಗ ಅದನ್ನು ಕೂಡ ನಿರಾಕರಿಸಿದರು ದಿವಾಕರ್, ಮಾಂಗಲ್ಯ ಬೆಲೆ ಗೊತ್ತಿದೆ ನನಗೆ ಅದರಿಂದ ಉಡುಗೊರೆ ಬೇಡ ಎಂದು ತಿಳಿಸಿದ್ದರು.
ದೊಡ್ಡ ಮೊತ್ತದ ಮಾಂಗಲ್ಯ ಸರವನ್ನು ಮರಳಿ ನೀಡಿ ತನ್ನ ಮಾನವೀಯತೆ ಮೆರೆದು ಇಂದಿನ ಯುವ ಜನತೆ ಹಾಗೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂದಿನ ಸಮಾಜದಲ್ಲಿ ಕಳ್ಳತನ ದರೋಡೆ, ಮೋಸ,ಇನ್ನಿತರ ಅನ್ಯಾಯ ನಡೆಯುವ ಈ ಸಂದರ್ಭದ ಮಾಂಗಲ್ಯ ಸರ ವಾಪಾಸ್ ನೀಡಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ.
ವರದಿ. ಪಿ. ಪಿ. ಸುಕುಮಾರ್ ಹಾಕತ್ತೂರು