ಕೊಂಡಂಗೇರಿಯಲ್ಲಿ ಈದ್-ಮಿಲಾದ್ ಆಚರಣೆ:ಮಾದಕ ವಸ್ತುಗಳ ಬಗ್ಗೆ ಜಾಗೃತಿ

ಮಡಿಕೇರಿ:ಕೊಂಡಂಗೇರಿ ಮುಸ್ಲಿಂ ಜಮಾಅತ್ ಆಯೋಜಿಸಿದ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ರವರ 1500ನೇ ಸಾಲಿನ ಜನ್ಮದಿನದ ಅಂಗವಾಗಿ ಕೊಂಡಂಗೇರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಈದ್ ಮಿಲಾದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ, ಮಡಿಕೇರಿ ಸಿ.ಐ ರಾಜು ರವರು ಪೈಗಂಬರ್ (ಸ)ರವರ ಚರಿತ್ರೆ ಹಾಗೂ ಸೌಹಾರ್ದತೆಯ ಕುರಿತು ಮಾತನಾಡಿದರು. ಯುವಕರಿಗೆ ಮಾದಕ ವಸ್ತುಗಳಿಂದ ಉಂಟಾಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸಿದರು. ವೇದಿಕೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಇದ್ದರು.
ಕಾನೂನು ವಿದ್ಯಾರ್ಥಿ ಸಿನಾನ್ ಕೊಂಡಂಗೇರಿರವರ ಮೂರನೇ ಪುಸ್ತಕವಾದ "ಮಕ್ಕಳಿಗಾಗಿ ಪೈಗಂಬರ್ ಸಣ್ಣ ಕಥೆಗಳು" ಎಂಬ ಪುಸ್ತಕವನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಕೊಂಡಂಗೇರಿ ಜಮಾಅತ್ ಅಧ್ಯಕ್ಷರಾದ ಯೂಸುಫ್ ಪಿವೈ, ಪ್ರಧಾನ ಕಾರ್ಯದರ್ಶಿ ಮುಜೀಬ್, ಖತೀಬರಾದ ಆಸಿಫ್ ಸಖಾಫಿ , ಸದರ್ ಮುಹಲ್ಲಿಂ ಹಕೀಮ್ ಸಹದಿ, ಹನೀಫ್ ಸಖಾಫಿ, ಕರೀಂ ಹಾಜಿ ಇದ್ದರು.