ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ ಡಿಸೆಂಬರ್ 07ರಂದು ಅರ್ಹತಾ ಪರೀಕ್ಷೆ

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ ಡಿಸೆಂಬರ್ 07ರಂದು ಅರ್ಹತಾ ಪರೀಕ್ಷೆ

ಮಡಿಕೇರಿ(Coorgdaily):-ಜುಲೈ 2026 ನೇ ಅಧಿವೇಶನಕ್ಕಾಗಿ ಉತ್ತರಖಂಡ ರಾಜ್ಯದ ಡೆಹಾರಡೂನ್ ರಾಷ್ಟ್ರೀಯ ಇಂಡಿಯಾನ್ ಮಿಲಿಟರಿ ಕಾಲೇಜಿಗೆ 08 ನೇ ತರಗತಿಗಾಗಿ ಪ್ರವೇಶ ಪಡೆಯಲು ಬಯಸುವ ಕರ್ನಾಟಕದ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2025 ರ ಡಿಸೆಂಬರ್, 07 ರಂದು ನಡೆಯಲಿದೆ.

ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ಜುಲೈ 01 2026 ರಂತೆ ಹನ್ನೊಂದುವರೆ ವರ್ಷದಿಂದ ಹದಿಮೂರು ವರ್ಷದೊಳಗೆ ಇರುವ (ಅಂದರೆ ದಿನಾಂಕ 02 ಜುಲೈ 2013 ರಿಂದ 01-01-2015 ರೊಳಗೆ ಜನಿಸಿರುವ) ಬಾಲಕ ಮತ್ತು ಬಾಲಕಿಯರು ಮಾತ್ರ ಈ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕ ಮತ್ತು ಯುವತಿಯರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ದಗೊಳಿಸುವುದು ಕಾಲೇಜಿನ ವರ್ಷವೊಂದಕ್ಕೆ ಪುಸ್ತಕ ವಿದ್ಯಾಭ್ಯಾಸದ ಶುಲ್ಕ ರೂ. 98,650 ಗಳು ಹಾಗೂ ರೂ.81,850 (ಎಸ್ಸಿ/ಎಸ್ಟಿ) ಗಳಾಗಿರುತ್ತದೆ. ಇದು ಕಾಲ ಕಾಲಕ್ಕೆ ಹೆಚ್ಚಾಗಬಹುದು. ವಿದ್ಯಾರ್ಥಿ ವಿದ್ಯಾರ್ಥಿನಿಯು ಪ್ರವೇಶ ಸಮಯದಲ್ಲಿ ರೂ 50 ಸಾವಿರ ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಈ ಮೊತ್ತವನ್ನು ವಿದ್ಯಾರ್ಥಿ ಪದವೀಧರನಾದ ಮತ್ತು ವಿದ್ಯಾರ್ಥಿನಿಯು ಪದವೀಧರೆಯಾದ ಬಳಿಕ ಹಿಂದಿರುಗಿಸಲಾಗುವುದು.

ಅರ್ಜಿ ನಮೂನೆಗಳನ್ನು ಪಡೆಯವ ವಿಧಾನ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕವನ್ನು ಪಡೆಯಲು ಸಾಮಾನ್ಯ ಅಭ್ಯರ್ಥಿಗಳು ರೂ 600 ಗಳ ಮತ್ತು ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ರೂ 555 ಗಳ ಬೇಡಿಕೆ ಹುಂಡಿ ಯನ್ನು ಲಿಖಿತ ವಿನಂತಿಯ ಜೊತೆಯಲ್ಲಿ ಹಾಗೂ ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರದೊಂದಿಗೆ THE COMMANDANT RIMS FUND" PAYABLE AT HDFC BANK BALLAPUR CHOWK DEHRADUN (BANK CODE1399) UTTARAKAND-248003 U-248003 ವಿಳಾಸ ಪಿನ್‍ಕೋಡ್ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ ದೊಡ್ಡ ಅಕ್ಷರದಲ್ಲಿ ಬರೆಯಬೇಕು. ಕಾನೂನು ಬಾಹಿರ ಅಥವಾ ಅಪೂರ್ಣ ವಿಳಾಸದಿಂದ ಉಂಟಾಗುವ ಪ್ರಾಸ್ಟಕ್ಟ್‍ಸ್‍ನ ಸಾಗಾಣಿಕೆಯಲ್ಲಿ ಯಾವುದೇ ಅಂಚೆ ವಿಳಂಬ ಅಥವಾ ನಷ್ಟಕ್ಕೆ ಆರ್‍ಐಎಂಎಸ್ ಸಂಸ್ಥೆಯು ಜವಾಬ್ದಾರರಾಗಿರುವುದಿಲ್ಲ. ಆನ್‍ಲೈನ್ ಪಾವತಿ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಜಾಲತಾಣ (ವೆಬ್‍ಸೈಟ್ https admussion Schoolmitra.com/#/admission/newEnquiry/ 6396eff3fe26e41841a5afd6) ನ್ನು ತಾಂತ್ರಿಕವಾಗಿ ಅಭಿವೃದ್ಧಿಗೊಳಿಸುವ ಕಾರ್ಯಾ ಪ್ರಗತಿಯಲ್ಲಿ ಇರುವುದರಿಂದ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಜಾಲತಾಣ(ವೆಬ್‍ಸೈಟ್)ಸದ್ಯಕ್ಕೆ ಲಭ್ಯವಿರುವುದಿಲ್ಲ, ಆದ್ದರಿಂದ ಪ್ರಾಸ್ಪಕ್ಟ್‍ಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕಗಳಿಗೆ ಆನ್‍ಲೈನ್ ಮೂಲಕ ಹಣ ಪಾವತಿಸಲು ಸಾಧ್ಯವಿರುವುದಿಲ್ಲ. ತಾಂತ್ರಿಕವಾಗಿ ಅಭಿವೃದ್ಧಿ ಕಾರ್ಯ ಮುಗಿದ ನಂತರ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಜಾಲತಾಣ (ವೆಬ್‍ಸೈಟ್)ನ್ನು ತೆರೆಯಲಾಗುವುದು. ಆದ್ದರಿಂದ ಸದ್ಯಕ್ಕೆ ಆಕಾಂಕ್ಷಿಗಳು ಬೇಡಿಕೆ ಹುಂಡಿ ಕಳುಹಿಸುವ ಮೂಲಕ ಪ್ರಾಸ್ಪೆಕ್ಸ್‍ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕವನ್ನು ಪಡೆದುಕೊಳ್ಳಬಹುದು.

 ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಅಡಕಗಳೊಂದಿಗೆ 2025ರ ಅಕ್ಟೋಬರ್ 15 ರೊಳಗೆ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾóರ್ಷಲ್ ಕೆ.ಎಂ.ಕಾರ್ಯಪ್ಪ ಭವನ ನಂ.58 ಪೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ ಬೆಂಗಳೂರು 560025 ಗೆ ಸಲ್ಲಸತಕ್ಕದ್ದು. ಅರ್ಜಿಯೊಂದಿಗೆ ಮುನ್ಸಿಪಾಲಿಟಿ/ ಗ್ರಾಮ ಪಂಚಾಯತಿ ಪ್ರಾಧಿಕಾರ ವತಿಯಿಂದ ಆಂಗ್ಲ ಭಾμÉಯಲ್ಲಿ ಪಡೆದ ಜನನ ಪ್ರಮಾಣ ಪತ್ರದ ದೃಢೀಕೃತ (ಇಂಗ್ಲಿμï ಆವೃತ್ತಿಯಲ್ಲಿ ಮಾತ್ರ), 5 ಪಾಸ್ ಪೆÇೀರ್ಟ್ ಸೈಜಿನ ಭಾವ ಚಿತ್ರಗಳು.(ಅರ್ಜಿಯಲ್ಲಿ ಅಂಟಿಸಿದ' ಭಾವ ಚಿತ್ರಗಳನ್ನು ಸೇರಿಸಿ), ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ಆಂಗ್ಲ ಭಾμÉಯಲ್ಲಿ ನೀಡಿದ ಜಾತಿ ಪ್ರಮಾಣ ಪತ್ರ, ಪರೀಕ್ಷಾ ಪ್ರವೇಶ ಪತ್ರವನ್ನು ರಿಜಿಸ್ಟರ್ ಅಂಚೆದ್ವಾರ ರವಾನಿಸಲು ರೂ.42 ಅಂಚೆ ಚೀಟಿ ಅಂಟಿಸಿದ ಲಕೋಟೆ, ಶಾಲಾ ಮುಖ್ಯೋಪಾಧ್ಯಾಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪತ್ರದ ಮೂಲ ಪ್ರತಿ (ಧೃಡೀಕರಿಸಿದ ಅಭ್ಯರ್ಥಿಯ ಭಾವಚಿತ್ರ ದೊಂದಿಗೆ) ತಹಶೀಲ್ದಾರರಿಂದ ಆಂಗ್ಲ ಬಾಷೆಯಲ್ಲಿ ಪಡೆದ ಕರ್ನಾಟಕ ರಾಜ್ಯದ ಮೂಲ ವಾಸಸ್ಥಾನ ಧೃಡೀಕರಣ ಪತ್ರ, ಆಧಾರ್ ಕಾರ್ಡ ಪ್ರತಿ (ಕಡ್ಡಾಯ) ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-25589459 ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.