ಎರಡು ಹುಲಿಗಳ ಮಧ್ಯೆ ಕಾದಾಟ:ಮೃತಪಟ್ಟ ಹುಲಿ

ಚಿಕ್ಕಮಗಳೂರು:ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ, ಲಕ್ಕವಳ್ಳಿ ವಲಯದ, ಸಾವೇ ಅರಣ್ಯ ಪ್ರದೇಶದ ಕೂಟ್ ರಸ್ತೆಯಲ್ಲಿ ಹುಲಿಯೊಂದು ಮೃತಪಟ್ಟಿದೆ. ಹುಲಿ ಕಳೇಬರ ಅಲ್ಲಿನ ಗಸ್ತು ಸಿಬ್ಬಂದಿಗಳಿಗೆ ಗುರುವಾರ ಬೆಳಿಗ್ಗೆ ಸಿಕ್ಕಿದೆ. ಅಂದಾಜು 7 ವರ್ಷದ ಹೆಣ್ಣು ಹುಲಿ ಆಗಿದ್ದು,ಎರಡು ಹುಲಿಗಳ ಮಧ್ಯೆ ಕಾದಾಟ ನಡೆದು ಸತ್ತಿದೆ ಎನ್ನಲಾಗಿದೆ. ದೇಹದಲ್ಲಿ ಹಲವಾರು ಗಾಯಗಳ ಗುರುತು ಪತ್ತೆಯಾಗಿದೆ.ಎನ್ ಆರ್ ಪುರ ಸರ್ಕಾರಿ ಪಶುವೈದ್ಯ ಶಿವಕುಮಾರ್ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಹುಲಿ ದೇಹದ ಕೆಲವು ತುಣುಕು ಮತ್ತು ರಕ್ತ ಮಾದರಿ ಸಂಗ್ರಹಿಸಿ ಸಾವಿನ ನಿಖರ ಮಾಹಿತಿ ತಿಳಿಯಲು ಉನ್ನತ ಮಟ್ಟದ ಪ್ರಯೋಗಾಲಯಕ್ಕೆ ಕಳಿಸಲು ತೀರ್ಮಾನಿಸಲಾಯಿತು. ಸ್ಥಳದಲ್ಲಿ ಲೋಹ ಪರಿಶೋಧಕ ಯಂತ್ರ ಬಳಸಿ ದೇಹದ ಮೇಲೆ ಲೋಹ ,ಮದ್ದು ಗುಂಡು ಇದೆಯೇ ಎಂದು ಪರಿಶೀಲನೆ ಮಾಡಿದರು.ಎಲ್ಲ ರೀತಿಯಲ್ಲೂ ಹುಲಿಯ ಕಳೇಬರ ಪರಿಶೀಲನೆ ಮಾಡಲಾಗಿದೆ . ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳ ಪ್ರಕಾರ ಸೂಕ್ತ ಕ್ರಮಗಳನ್ನು ಅನುಸರಿಸಲಾಯಿತು. ಅನಂತರ ಹುಲಿಯ ಕಳೇಬರ ಸುಡಲಾಯಿತು.