ಯುವಕರ ಗುಂಪಿನಿಂದ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಡೆದಾಟ: ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ
ಕುಶಾಲನಗರ:ಬುಧವಾರ ರಾತ್ರಿ 7.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸುಂಟಿಕೊಪ್ಪ ಸಮೀಪದಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ನಾಲ್ವರ ವಿರುದ್ದ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಸುಂಟಿಕೊಪ್ಪದ ಅಬ್ಬಾಸ್ ಹಾಗೂ ಶಫೀಕ್ ಎಂಬವರ ಮೇಲೆ ಹಲ್ಲೆ ಕುಶಾಲನಗರ, ಸುಂಟಿಕೊಪ್ಪ ಭಾಗದ ಕಣ್ಣನ್, ಬಿಲಾಲ್, ಅಭಿ, ಸಜಿ ಮತ್ತು ಇತರರು ಹಲ್ಲೆ ನಡೆಸಿದ್ದಾರೆ.ಇದೀಗ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ ಕ್ರಮಕೈಗೊಂಡಿದ್ದಾರೆ.