ಫ್ಲಾಗ್ ಫುಟ್ಬಾಲ್ ಚಾಂಪಿಯನ್ ಶಿಪ್: ಅಂತರರಾಷ್ಟ್ರೀಯ ಮಟ್ಟಕ್ಕೆ ಬಿ.ಎಂ ದೀನಾ ಆಯ್ಕೆ

ಸಿದ್ದಾಪುರ :ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಫ್ಲಾಗ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕಿಯಾಗಿ ಪ್ರತಿನಿದಿಸಿ ಸಾಧನೆ ಮಾಡಿ ಅಕ್ಟೋಬರ್ ನಲ್ಲಿ ಚೈನಾ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಹಲವು ವರ್ಷಗಳಿಂದಲೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ದೀನಾ ತರಬೇತುದಾರರಾಗಿ ಹಾಗೂ ರಾಜ್ಯ ಮಟ್ಟದ ತಂಡಗಳ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತೆ ಶಿಕ್ಷಕಿ ಬಿ ಬಿ ಜಾಜಿ ಹಾಗೂ ಮೊಹನ್ ಕುಮಾರ್ ದಂಪತಿಗಳ ಪುತ್ರಿಯಾಗಿದ್ದಾರೆ.