ಗ್ರಾಮ ಪಂಚಾಯ್ತಿಗಳು ಹಾಗೂ ಗ್ರಾಮ ಸಭೆಗಳು ಬಲಿಷ್ಟವಾದವು,ಅವುಗಳಿಗೆ ಇರುವ ಅಧಿಕಾರಗಳನ್ನು ತಿಳಿದುಕೊಳ್ಳಬೇಕು: ಶಾಸಕ ಮಂತರ್ ಗೌಡ

ಗ್ರಾಮ ಪಂಚಾಯ್ತಿಗಳು ಹಾಗೂ ಗ್ರಾಮ ಸಭೆಗಳು ಬಲಿಷ್ಟವಾದವು,ಅವುಗಳಿಗೆ ಇರುವ ಅಧಿಕಾರಗಳನ್ನು ತಿಳಿದುಕೊಳ್ಳಬೇಕು: ಶಾಸಕ ಮಂತರ್ ಗೌಡ

ಸೋಮವಾರಪೇಟೆ :- ಗ್ರಾಮ ಪಂಚಾಯ್ತಿಗಳು ಹಾಗೂ ಗ್ರಾಮ ಸಭೆಗಳು ಬಲಿಷ್ಟವಾದವು ಅವುಗಳಿಗೆ ಇರುವ ಅಧಿಕಾರಗಳನ್ನು ತಿಳಿದುಕೊಳ್ಳಬೇಕೆಂದು ಶಾಸಕ ಮಂತರ್ ಗೌಡ ತಿಳಿಸಿದರು ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ತಾಲೂಕು ಮಟ್ಟದಲ್ಲಿ ಸಮಿತಿಯನ್ನುರಚಿಸಿದೆ ಎಂದರು. ಗ್ರಾಮ ಪಂಚಾಯತಿ ಹಾಗೂ ಗ್ರಾಮ ಸಭೆಗಳು ಅತ್ಯಂತ ಪ್ರಭಾವ ಶಾಲಿಯಾಗಿದೆ ,ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ತಮ್ಮ ಅಧಿಕಾರವನ್ನು ಅರಿತು ಕರ್ತವ್ಯ ನಿರ್ವಹಿಸಿ,ನೀವುಗಳು ಮಾಡಿದ ನಿರ್ಣಯಗಳನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಅಷ್ಟು ಅಧಿಕಾರವಿದೆ ಎಂದರು.

ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ನೀಡಿದ 25,686.56 ಲಕ್ಷ ರೂಪಾಯಿಗಳ ಕ್ರಿಯಜೋಜನೆಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಕೃಷ್ಣಮೂರ್ತಿ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್,ಸದಸ್ಯರುಗಳಾದ ನಿಡ್ತಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್,ಬ್ಯಾಡಗೊಟ್ಟಾ ಅಧ್ಯಕ್ಷೆ ಪಾವನ,ಡುಂಡಳ್ಳಿ ಅಧ್ಯಕ್ಷೆ ಭವಾನಿ,ಗರ್ವಾಲೆ ಅಧ್ಯಕ್ಷೆ ನೇತ್ರಾಬಾಯಿ, ದೊಡ್ಡಮಳ್ತೆ ಅಧ್ಯಕ್ಷ ಗೋಪಾಲ ಕೃಷ್ಣ, ಬೆಟ್ಟದಳ್ಳಿ ಅಧ್ಯಕ್ಷ ತಮ್ಮಯ ಹಾಗೂ ವಿವಿದ ಇಲಾಖೆ ಅಧಿಕಾರಿಗಳು ಉಪಸ್ತಿತರಿದ್ದರು.