ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ: ಹ್ಯಾಂಡ್ ಬಾಲ್ ನಲ್ಲಿ ನಾಟಿ ಬಾಯ್ಸ್ ಚಾಂಪಿಯನ್: ಹಗ್ಗಜಗ್ಗಾಟದಲ್ಲಿ ಮಡ್ ಫೈಟರ್ಸ್ ಚಾಂಪಿಯನ್

ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ: ಹ್ಯಾಂಡ್ ಬಾಲ್ ನಲ್ಲಿ ನಾಟಿ ಬಾಯ್ಸ್ ಚಾಂಪಿಯನ್: ಹಗ್ಗಜಗ್ಗಾಟದಲ್ಲಿ ಮಡ್ ಫೈಟರ್ಸ್ ಚಾಂಪಿಯನ್
ಫೋಟೋ (1): ಹ್ಯಾಂಡ್ ಬಾಲ್ ಚಾಂಪಿಯನ್ ನಾಟಿ ಬಾಯ್ಸ್ :ಫೋಟೋ(2) ಹಗ್ಗಜಗ್ಗಾಟ ಚಾಂಪಿಯನ್ ಮಡ್ ಫೈಟರ್ಸ್

ಮಡಿಕೇರಿ;ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಕೆಸರುಗದ್ದೆ ಕ್ರೀಡಾಕೂಟವು ಮಡಿಕೇರಿ ಸಮೀಪದ ತಾಳತ್ ಮನೆಯ ಮಲ್ಲನ ಬೆಳ್ಯಪ್ಪನವರ ಗದ್ದೆಯಲ್ಲಿ ನಡೆಯಿತು.ಪತ್ರಕರ್ತರಿಗಾಗಿ ಹ್ಯಾಂಡ್ ಬಾಲ್,ಹಗ್ಗ ಜಗ್ಗಾಟ ,ಕೆಸರು ಗದ್ದೆ ಓಟದಲ್ಲಿ ಜಿಲ್ಲೆಯ ಪತ್ರಕರ್ತರು ಪಾಲ್ಗೊಂಡಿದ್ದರು.

ಎಲ್ಲಾ ವಿಭಾಗದಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದು ಹ್ಯಾಂಡ್ ಬಾಲ್ ವಿಭಾಗದಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ನಾಟಿ ಬಾಯ್ಸ್ ತಂಡ ಪ್ರಥಮ,ದಿವಾಕರ್ ನಾಯಕತ್ವದ ಮಡ್ ಫೀಲ್ಡರ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆಕೊಂಡಿತು.ಹಗ್ಗ ಜಗ್ಗಾಟದಲ್ಲಿ ಆದರ್ಶ್ ನಾಯಕತ್ವದ ಮಡ್ ಫೈಟರ್ಸ್ ತಂಡ ಪ್ರಥಮ,ಇಸ್ಮಾಯಿಲ್ ಕಂಡಕರೆ ನಾಯಕತ್ವದ ನಾಟಿ ಬಾಯ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.ಕೆಸರುಗದ್ದೆ ಓಟದ ಮಹಿಳಾ ವಿಭಾಗದಲ್ಲಿ ವತ್ಸಲ ಎಸ್.ಆರ್. ಪ್ರಥಮ,ಬಿ.ಆರ್.ಸವಿತಾ ರೈ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಪುರುಷರ 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಪ್ರಥಮ ,ಅಜ್ಜಮಾಡ ರಮೇಶ್ ಕುಟ್ಟಪ್ಪ ದ್ವಿತೀಯ ಹಾಗೂ ಪಾರ್ಥ ಚಿಣ್ಣಪ್ಪ ತೃತೀಯ ಸ್ಥಾನ ಪಡೆದುಕೊಂಡರು.ಕಿರಿಯರ ವಿಭಾಗದಲ್ಲಿ ಇಸ್ಮಾಯಿಲ್ ಕಂಡಕರೆ ಪ್ರಥಮ, ದಿವಾಕರ್ ಜಾಕಿ ದ್ವಿತೀಯ ಹಾಗೂ ನವೀನ್ ಡಿಸೋಜಾ ತೃತೀಯ ಬಹುಮಾನ ಪಡೆದುಕೊಂಡರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕ್ರೀಡಾ ಸಂಚಾಲಕರಾದ ಸುವರ್ಣ ಮಂಜು, ಕೆಸರುಗದ್ದೆ ಮಾಲಿಕರಾದ ಮಲ್ಲನ ಆನಂದ್ ಪಾಲ್ಗೊಂಡಿದ್ದರು.ಕ್ರೀಡಾಕೂಟದ ತೀರ್ಪುಗಾರರಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಹೆಬ್ಬಟಗೇರಿ ಮತ್ತು ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಕರಾದ ದೀನಾ ಪಾಲ್ಗೊಂಡಿದ್ದರು.ಪ್ರಾರ್ಥನ ರೈ ಕಾರ್ಯಕ್ರಮದಲ್ಲಿ ಪ್ರಾರ್ಥಿಸದರೆ ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷರಾದ ನವೀನ್ ಡಿಸೋಜಾ ಸರ್ವರನ್ನು ಸ್ವಾಗತಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರೆ ವಿಶ್ಚಕುಂಬೂರು ಕೊನೆಯಲ್ಲಿ ವಂದಿಸಿದರು.