ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಲಾಕಲರವ: ವಲಯ ಮಟ್ಟದ ಸಾಂಸ್ಕೖತಿಕ ಸ್ಪಧೆ೯ ಸೌಹಾರ್ದತೆಗೆ, ಒಗ್ಗಟ್ಟಿಗೆ ಸಾಂಸ್ಕೖತಿಕ ಕಾಯ೯ಕ್ರಮಗಳು ಸಹಕಾರಿ: ಮೇಜರ್ ರಾಘವ್

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಲಾಕಲರವ: ವಲಯ ಮಟ್ಟದ ಸಾಂಸ್ಕೖತಿಕ ಸ್ಪಧೆ೯   ಸೌಹಾರ್ದತೆಗೆ, ಒಗ್ಗಟ್ಟಿಗೆ ಸಾಂಸ್ಕೖತಿಕ ಕಾಯ೯ಕ್ರಮಗಳು ಸಹಕಾರಿ: ಮೇಜರ್ ರಾಘವ್

ಮಡಿಕೇರಿ ನ 3: ಸಾಂಸ್ಕೖತಿಕ ಚಟುವಟಿಕೆಗಳ ಮೂಲಕ ಸೌಹಾಧ೯ತೆ, ಒಗ್ಗಟ್ಟು ಸಾಧ್ಯವಿದೆ ಎಂದು ಮಡಿಕೇರಿಯ ಫೀಲ್ಡ್ ಮಾಷ೯ಲ್ ಕೆ..ಎಂ.ಕಾಯ೯ಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ. ರಾಘವ ಅಭಿಪ್ರಾಯಪಟ್ಟಿದ್ದಾರೆ.

 ನಗರದ ಪೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ರೋಟರಿ ವಲಯ 6 ರ ಕಲಾಕಲರವ ಸಾಂಸ್ಕೖತಿಕ ಸ್ಪಧೆ೯ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯು ಸ್ವಾಥ೯ರಹಿತವಾಗಿ ಸಾಮಾಜಿಕ ಕಳಕಳಿಯೊಂದಿಗೆ ನಿರಂತವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ರೋಟರಿ ಕೇವಲ ಸಂಸ್ಥೆಯಾಗಿ ಮಾತ್ರವಲ್ಲದೇ ಸಮಾಜದಲ್ಲಿಯೂ ಜನರನ್ನು ಒಗ್ಗೂಡಿಸುವ ಸಂದೇಶಗಳನ್ನು ಸಾರಿ ಹೇಳುತ್ತಾ ಬಂದಿದೆ. ಅವಿಭಕ್ತ ಕುಟುಂಬ ಪದ್ದತಿ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ರೋಟರಿಯಂಥ ಸಂಸ್ಥೆ ಎಲ್ಲರನ್ನೂ ಒಗ್ಗೂಡಿಸಿ ಸ್ವಾಥ೯ ರಹಿತ ಸಮಾಜ ಸೇವಗೆ ಕಾಯ೯ಪ್ರವೖತ್ತವಾಗಿರುವುದು ಭವಿಷ್ಯದ ಸಮಾಜದ ದೖಷ್ಟಿಯಿಂದ ಆಶಾದಾಯಕವಾಗಿದೆ ಎಂದು ಶ್ಲಾಘಿಸಿದರು.

 ಈಗಿನ ಕಾಲದಲ್ಲಿ ಜನ ಸ್ವಾಥ೯ದ ಉದ್ದೇಶದ ಕಾಯ೯ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎಲ್ಲವೂ ತನಗೆ ಮಾತ್ರ ಎಂಬ ಸ್ವಾಥ೯ ಮನೋಭಾವ.ಕಂಡುಬರುತ್ತಿದೆ. ಆದರೆ ರೋಟರಿಯಲ್ಲಿ ಮಾತ್ರ ಸಮಾಜ ಮುಖಿ ಚಿಂತನೆ ಸಾಧ್ಯವಾಗುತ್ತಿದೆ. ಧನಾತ್ಮಕ ಚಿಂತನೆ, ಜನಪರ ಕಾಯ೯ಯೋಜನೆಗಳಿಂದ ರೋಟರಿ ಸದಾ ಸಮಾಜಮುಖಿಯಾಗಿದೆ ಎಂದು ಪ್ರೊ ರಾಘವ ಶ್ಲಾಘಿಸಿದರು. ರೋಟರಿ ಕೇವಲ ಸಂಸ್ಥೆಯಾಗಿ ಮಾತ್ರ ಗುರುತಿಸಲ್ಪಡದೇ ಎಂಥಹುದ್ದೇ .ಸಮಸ್ಯೆ, ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಸಮಸ್ಯೆ, ಸವಾಲುಗಳನ್ನು ಪರಿಹರಿಸುವ ಬೖಹತ್ ಶಕ್ತಿಯಾಗಿ ಹೊರಹೊಮ್ಮಿದೆ ಎಂದೂ ಹೆಮ್ಮೆಯಿಂದ ನುಡಿದರು.

 ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, 22 ವಷ೯ಗಳ ಇತಿಹಾಸವಿರುವ ಮಿಸ್ಟಿ ಹಿಲ್ಸ್ 3 ನೇ ಬಾರಿಗೆ ವಲಯ ಮಟ್ಟದ ಸಾಂಸ್ಕೖತಿಕ ಸ್ಪಧೆ೯ಗಳನ್ನು ಆಯೋಜಸಿದ್ದು, 7 ಕ್ಲಬ್ ಗಳಿಗೆ ಸೇರಿದ 160 ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ ಮಾತನಾಡಿ, ಸೇವೆಗೆ ಎಷ್ಟು ಮಹತ್ವ ನೀಡುತ್ತೆವೆಯೋ ಅಂತೆಯೇ ಸಾಂಸ್ಕೖತಿಕ, ಕ್ರೀಡೆ ಸೇರಿದಂತೆ ಸ್ನೇಹಪರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು. ವಲಯ 6 ರ ಸಹಾಯಕ ಗವನ೯ರ್ ರಾಜುಗೌಡ ಮಾತನಾಡಿ, ಸಮಾಜ ಸೇವಾಪರ ಸದಸ್ಯರಲ್ಲಿರುವ ವಿವಿಧ ಕ್ಷೇತ್ರಗಳ ಪ್ರತಿಭೆ ಹೊರಹಾಕಲು ಇಂಥ ಕಾಯ೯ಕ್ರಮ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ವಲಯ 6 ರ ಸಾಂಸ್ಕೖತಿಕ ಸ್ಪಧೆ೯ಗಳ ಸಮಿತಿ ಸಂಚಾಲಕಿ ತೋಟಂಬೈಲು ಸುಭಾಷಿಣಿ ಮಾತನಾಡಿ, ರೋಟರಿ ಸದಸ್ಯರಲ್ಲಿನ ಕಲಾಸಕ್ತಿಯನ್ನು ಉತ್ತೇಜಿಸಲು ಇಂಥ ಕಾಯ೯ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್ ನ ಸಾಂಸ್ಕೖತಿಕ ಸಮಿತಿ ಸಂಚಾಲಕ ಜಯಂತ್ ಪೂಜಾರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ವಲಯ ಸೇನಾನಿ ಕಾಯ೯ಪ್ಪ ವೇದಿಕೆಯಲ್ಲಿದ್ದರು. ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ನಿರೂಪಿಸಿದರು.

 ಕಲಾಕಲರವ ಸ್ಪಧಾ೯ ವಿಜೇತರು ..

ಹಾಡುಗಾರಿಕೆ ( ಪುರುಷರು) - ಪ್ರಥಮ ಶ್ರೀಹರಿರಾವ್ (ಮಿಸ್ಟಿ ಹಿಲ್ಸ್ ಮಡಿಕೇರಿ) ದ್ವಿತೀಯ - ರವಿ (ಮಡಿಕೇರಿ ರೋಟರಿ ವುಡ್ಸ್ ) ತೖತೀಯ - ಕೆ.ರಾಜೀವ್ (ಗೋಣಿಕೊಪ್ಪ ರೋಟರಿ) ಹಾಡುಗಾರಿಕೆ ( 14 ವಷ೯ಕ್ಕಿಂತ ಕೆಳಗಿನ ವಿಭಾಗ) - ಪ್ರಥಮ - ಲಿಪಿಕಾ ದೇಚಮ್ಮ (ರೋಟರಿ ವುಡ್ಸ್ ಮಡಿಕೇರಿ) ದ್ವಿತೀಯ - ಸುಮೇದ ರಾವ್ (ಮಿಸ್ಟಿ ಹಿಲ್ಸ್ ) , ತೖತೀಯ ಮಹದೇವ (ಹುಣಸೂರು) ನಾಲ್ಕನೇ ಸ್ಥಾನ - ಚಿರಂಜೀವಿ (ಪಿರಿಯಾಪಟ್ಟಣ ಮಿಡ್ ಟೌನ್ ) ಹಾಡುಗಾರಿಕೆ ( 14 ರಿಂದ 21 ನೇ ವಯಸ್ಸಿನ ವಿಭಾಗ) ಪ್ರಥಮ -ಶಾವ೯ರಿ ರೈ (ಮಿಸ್ಟಿ ಹಿಲ್ಸ್ ) ದ್ವಿತೀಯ - ಇಶಾನಿ ರೈ (ವಿರಾಜಪೇಟೆ ರೋಟರಿ ) ತೖತೀಯ - ನಮೖತ್ ಗೌಡ ( ಮಿಸ್ಟಿ ಹಿಲ್ಸ್ ) ನೖತ್ಯ ( 14 ರಿದ 21 ವಯಸ್ಸಿನ ವಿಭಾಗ) - ಪ್ರಥಮ - ಪ್ರಚೋದಯ (ಗೋಣಿಕೊಪ್ಪ ರೋಟರಿ ) ದ್ವಿತೀಯ - ಅನೂಹ್ಯ ಜಿ. ರವಿಶಂಕರ್ ( ಮಿಸ್ಟಿ ಹಿಲ್ಸ್) , ತೖತೀಯ - ಸೖಜನ್ (ಹುಣಸೂರು ರೋಟರಿ) ನೖತ್ಯ ಸ್ಪಧೆ೯ ( ಸೋಲೋ) - ಪ್ರಥಮ - ಮೖದಂಗ ( ಹುಣಸೂರು ರೋಟರಿ) ದ್ವಿತೀಯ - ರಿಶಾ ಪೂಜಾರಿ (ಮಿಸ್ಟಿ ಹಿಲ್ಸ್ ) ತೖತೀಯ - ನವನಿಕ (ಗೋಣಿಕೊಪ್ಪ) ಹಾಡುಗಾರಿಕೆ ( ಗ್ರೂಪ್ ) - ಪ್ರಥಮ - ಹುಣಸೂರು ರೋಟರಿ, ದ್ವಿತೀಯ - ರೋಟರಿ ವುಡ್ಸ್ ಮಡಿಕೇರಿ , ತೖತೀಯ ಗೋಣಿಕೊಪ್ಪ ರೋಟರಿ ಹಾಡುಗಾರಿಕೆ ( ಸೋಲೋ - ಮಹಿಳಾ ವಿಭಾಗ) - ಪ್ರಥಮ - ಪ್ರಮೀಳಾ ಶೆಟ್ಟಿ (ರೋಟರಿ ವುಡ್ಸ್ ) , ದ್ವಿತೀಯ - ಡಾ.ಸಂಗೀತ (ಹುಣಸೂರು), ತೖತೀಯ - ಕೆ.ಎಸ್.ಮಮತಾ ( ಕೆ.ಆರ್.ನಗರ) ಡ್ಯೂಯೆಟ್ ನೖತ್ಯ - ಪ್ರಥಮ - ಧಿಲನ್ ಚಂಗಪ್ಪ ಮತ್ತು ರಿಶ್ತಾ ಚಂಗಪ್ಪ(ಗೋಣಿಕೊಪ್ಪ ರೋಟರಿ) ದ್ವಿತೀಯ - , ಡಾ.ಸಂಗೀತ ಮತ್ತು ಮೖದಂಗ್ ( ಹುಣಸೂರು ರೋಟರಿ ), ತೖತೀಯ - ನಮಿತಾ ರೈ ಮತ್ತು ಅಧಿತಿ ಚೇತನ್ (ಮಿಸ್ಟಿ ಹಿಲ್ಸ್ ) ಹಾಡುಗಾರಿಕೆ (ಡ್ಯುಯೆಟ್ ) - ಪ್ರಥಮ - ಶ್ರೀಹರಿರಾವ್ ಮತ್ತು ಅನೂಹ್ಯ ರವಿಶಂಕರ್ ( ಮಿಸ್ಟಿ ಹಿಲ್ಸ್ ) ದ್ವಿತೀಯ - ಡಾ.ಸಂಗೀತ ಮತ್ತು ಮಹೇಶ್ (ಹುಣಸೂರು ರೋಟರಿ ) ,ತೖತೀಯ - ಆದಿತ್ಯ ಮತ್ತು ಇಶಾನಿ ರೈ (ವಿರಾಜಪೇಟೆ ರೋಟರಿ ) ನಾಲ್ಕನೇ ಸ್ಥಾನ - ರವಿಕುಮಾರ್ ಮತ್ತು ಸ್ಮಿತಾ ( ರೋಟರಿ ವುಡ್ಸ್ ) ಸ್ಟಾಂಡ್ ಅಪ್ ಕಾಮಿಡಿ - ಪ್ರಥಮ - ನಾಗರಾಜ್ ಭಾವಿಕಟ್ಟೆ (ಕೆ.ಆರ್.ನಗರ ರೋಟರಿ ), ದ್ವಿತೀಯ - ಡಾ. ಬಸವರಾಜ್ (ಹುಣಸೂರು ರೋಟರಿ) ತೖತೀಯ - ಹರೀಶ್ ಕಿಗ್ಗಾಲು ( ರೋಟರಿ ವುಡ್ಸ್ ) ಸ್ಕಿಟ್ - ಪ್ರಥಮ ಶಾಲೆಯಲ್ಲಿ ಸ್ವಚ್ಚತಾ ಸಂದೇಶ ( ಹುಣಸೂರು ರೋಟರಿ ) , ದ್ವಿತೀಯ - ರೋಟರಿಯಿಂದ ಸಹಾಯ ಹಸ್ತ ಸಂದೇಶ ( ಗೋಣಿಕೊಪ್ಪ ರೋಟರಿ) , ತೖತೀಯ - ಸ್ವಚ್ಚ ಕೊಡಗು - ಸುಂದರ ಕೊಡಗು ಸಂದೇಶ (ರೋಟರಿ ವುಡ್ಸ್ ಮಡಿಕೇರಿ) ಸಮೂಹ ನೖತ್ಯ - ಪ್ರಥಮ - ಗೋಣಿಕೊಪ್ಪ ರೋಟರಿ ಕ್ಲಬ್ , ದ್ವಿತೀಯ - ಹುಣಸೂರು ರೋಟರಿ ಕ್ಲಬ್, ತೖತೀಯ - ರೋಟರಿ ವುಡ್ಸ್ ಮಡಿಕೇರಿ.

ರೋಟರಿ ಜಿಲ್ಲೆಯ ಮಾಜಿ ಗವನ೯ರ್ ರವೀಂದ್ರ ಭಟ್, ನಿಯೋಜಿತ ಗವನ೯ರ್ ಸೋಮಶೇಖರ್, ರೋಟರಿ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ಸಾಂಸ್ಕೖತಿಕ ಸಮಿತಿ ಸಂಚಾಲಕರಾದ ಸುಭಾಷಿಣಿ, ಜಯಂತ್ ಪೂಜಾರಿ ಹಾಜರಿದ್ದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಅನಿಲ್ ಹೆಚ್.ಟಿ ಮತ್ತು ರಶ್ಮಿ ದೀಪಾ ನಿರೂಪಿಸಿದರು. ಸ್ಪಧಾ೯ ತೀಪು೯ಗಾರರಾಗಿ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಕಾಲೇಜಿನ ಉಪನ್ಯಾಸಕಿ ಚೆಯ್ಯಂಡ ಸೀಮಾ ಮಂದಪ್ಪ, ವಿರಾಜಪೇಟೆಯ ನೖತ್ಯ ತರಬೇತುದಾರರಾದ ಜಿನಿನ್ ಮೋರಾಸ್, ಪಿ.ಡಿ.ಸುಧಾ ಕಾಯ೯ನಿವ೯ಹಿಸಿದ್ದರು.