ಕುಶಾಲನಗರ: ಮಳೆಯಿಂದಾಗಿ ಗೋಡೆ ಕುಸಿದು ಗಾಯಗೊಂಡ ಯುವಕ

ಕುಶಾಲನಗರ:ತೀವ್ರ-ಮಳೆಯಿಂದಾಗಿ ಮನೆಯ ಗೋಡೆ ಕುಸಿತಗೊಂಡ ಘಟನೆ ಕುಶಾಲನಗರ ತಾಲ್ಲೂಕಿನ ಹುಲುಸೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಮನೆಯಲ್ಲಿ ಮಲಗಿದ್ದ ದಿ.ವೀರಾಚಾರಿ ಹಾಗೂ ಸಾವಿತ್ರಮ್ಮ ಎಂಬುವವರ ಪುತ್ರ ಸಂತೋಷ್ ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಢ ನಿದ್ರೆಯಲ್ಲಿದ್ದಾಗ ಹಾಸಿಗೆ ಮೇಲೆ ಗೋಡೆ ಕುಸಿದ ಪರಿಣಾಮ ಸಂತೋಷ್ ಅವರ ಬಲಭಾಗದ ದೇಹಕ್ಕೆ ಗಾಯವಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದೆ.ಮನೆಯ ಒಳಗಡೆ ಮಲಗಿದ್ದ ವೃದ್ದೆ ಸಾವಿತ್ರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಆರೋಗ್ಯವನ್ನು ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ವಿಚಾರಿಸಿದರು.