ಕುಶಾಲನಗರ : ವಿಭಾಗೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ : ಕೊಡಗು ಪ್ರಥಮ, ಉಡುಪಿ ದ್ವಿತೀಯ ಸ್ಥಾನ
ಕುಶಾಲನಗರ : ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮವಾರಪೇಟೆ ಹಾಗೂ ಫಾತಿಮಾ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಕೊಡಗು ತಂಡ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಇಲ್ಲಿನ ಜಂಪ್ ಸ್ಮಾಶ್ ಒಳಾಂಗಣದಲ್ಲಿ ಕೊಡಗು ಹಾಗೂ ಉಡುಪಿ ತಂಡಗಳ ನಡುವೆ ನಡೆದ ತೀವ್ರ ಹಣಾಹಣಿಯ ಪಂದ್ಯಾವಳಿಯಲ್ಲಿ ಕೊಡಗು ತಂಡ ಚಾಣಾಕ್ಷತನದ ಆಟ ಪ್ರದೇಶಿಸಿ ಜಯಗಳಿಸಿತು. ಉಡುಪಿ ತಂಡ ದ್ವಿತೀಯ ಸ್ಥಾನಗಳಿಸಿರು.17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಪ್ರಥಮ ಹಾಗೂ ಮೈಸೂರು ತಂಡ ದ್ವಿತೀಯ ಸ್ಥಾನಗಳಿಸಿದೆ.
14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಸ್ಥಾನಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ಪ್ರಥಮ ಹಾಗೂ ಕೊಡಗು ದ್ವಿತೀಯ ಸ್ಥಾನಗಳಿಸಿದೆ. ವಿಜೇತ ತಂಡಗಳಿಗೆ ಫಾತಿಮಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭ ಫಾತಿಮಾ ಕಾನ್ವೆಂಟ್ ನ ವ್ಯವಸ್ಥಾಪಕಿ ಸಿಸ್ಟರ್ ಆಗ್ನೆಸ್,ಸಂಚಾಲಕಿ ಸಿಸ್ಟರ್ ಫ್ಲಾರೇಟ್,ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಉದ್ಯಮಿ ಗೌತಮ್ ,ವಕೀಲ ಶರತ್,ಕ್ರೀಡಾಕೂಟದ ಸಂಚಾಲಕ ಸಂತೋಷ್,ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸುಜಾತ, ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್,ಬೋಜೇಗೌಡ,ಪ್ರತಾಪ್, ದೊಡ್ಡಯ್ಯ, ನಂದಿನಿ.ಆಶಾ,ಕುಸುಮ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಕ್ರೀಡಾಕೂಟ ನಡೆಯಲು ಉಚಿತವಾಗಿ ಒಳಾಂಗಣ ಒದಗಿಸಿದ ಜಂಪ್ ಸ್ಮಾಶ್ ಒಳಾಂಗಣ ವ್ಯವಸ್ಥಾಪಕ ಶರತ್, ಕ್ರೀಡಾಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಫಾತಿಮಾ ಶಾಲೆಯ ಸಿಸ್ಟರ್ ಚೇತನ,ಸಿಸ್ಟರ್ ಆಗ್ನೇಸ್ ಅವರನ್ನು ಸನ್ಮಾನಿಸಲಾಯಿತು.
ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿದ ಕೊಡಗು ತಂಡಕ್ಕೆ ಫಾತಿಮಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಟ್ರೋಫಿ ವಿವರಿಸಿದರು.
ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನಗಳಿಸಿದ ಉಡುಪಿ ತಂಡಕ್ಕೆ ಫಾತಿಮಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನ ಟ್ರೋಫಿ ವಿವರಿಸಿದರು.ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಇದ್ದಾರೆ.
