ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ : ನೆಲ್ಲಮಕ್ಕಡ ತಂಡಕ್ಕೆ ಭರ್ಜರಿ ಗೆಲುವು

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ : ನೆಲ್ಲಮಕ್ಕಡ ತಂಡಕ್ಕೆ ಭರ್ಜರಿ ಗೆಲುವು

ಮಡಿಕೇರಿ ಡಿ.26 : ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ'ಯ ಮೊದಲ ದಿನದ ಹಣಾಹಣಿಯಲ್ಲಿ ಮಂಡೇಪಂಡ ತಂಡ ಪರದಂಡ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲವು ಸಾಧಿಸಿತು. 

ಮಂಡೇಪಂಡ ಪರ ಚಂದನ್ ಕಾರ್ಯಪ್ಪ ಹಾಗೂ ಚಂಗಪ್ಪ ಎಂ.ಪಿ ತಲಾ ಒಂದು ಗೋಲು ಬಾರಿಸಿದರು. ಪರದಂಡ ಪರ ರಂಜನ್ ಅಯ್ಯಪ್ಪ ಗೋಲು ದಾಖಲಿಸಿದರು.

ಚೆಪ್ಪುಡಿರ ಮತ್ತು ಪಳಂಗಂಡ ನಡುವಿನ ಪಂದ್ಯ ಯಾವುದೇ ಗೋಲು ದಾಖಲಾಗದೆ ಡ್ರಾದಲ್ಲಿ ಅಂತ್ಯಗೊಂಡಿತು. ನೆಲ್ಲಮಕ್ಕಡ ಮತ್ತು ಮಾಚಮಾಡ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 6-0 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪೂವಣ್ಣ ಹಾಗೂ ಅಯ್ಯಪ್ಪ ತಲಾ ಎರಡು ಗೋಲು ಬಾರಿಸಿದರು. ತಿಮ್ಮಯ್ಯ ಹಾಗೂ ಸಚಿನ್ ತಲಾ ಒಂದು ಗೋಲು ದಾಖಲಿಸಿದರು.  

ತಲಾ ಒಂದು ಗೋಲು ದಾಖಲಾಗುವ ಮೂಲಕ ಕಲಿಯಂಡ ಮತ್ತು ಕುಪ್ಪಂಡ ನಡುವಿನ ಪಂದ್ಯ ಡ್ರಾ ಗೊಂಡಿತು. ಕಲಿಯಂಡ ಪರ ಚಿರಂತ್ ಹಾಗೂ ಕುಪ್ಪಂಡ ಪರ ಸೋಮಯ್ಯ ಗೋಲು ಬಾರಿಸಿದರು.