ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನ ಪಂದ್ಯ:ಕಂಡಕರೆ ಶಮ್ಮಾಸ್ ಕಾಲ್ಚಳಕ ಸಿ.ಎಫ್.ಸಿ ಪಾಲಿಬೆಟ್ಟ ತಂಡಕ್ಕೆ ಗೆಲುವು

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನ ಪಂದ್ಯ:ಕಂಡಕರೆ ಶಮ್ಮಾಸ್ ಕಾಲ್ಚಳಕ ಸಿ.ಎಫ್.ಸಿ ಪಾಲಿಬೆಟ್ಟ ತಂಡಕ್ಕೆ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಎರಡನೇ ದಿನದ ಮೂರನೇ ಪಂದ್ಯದಲ್ಲಿ ಪಾಲಿಬೆಟ್ಟ ಸಿಎಫ್.ಸಿ ತಂಡವು 04-02 ಗೋಲುಗಳ ಅಂತರದಿಂದ ಕಾಫಿಲ್ಯಾಂಡ್ ತಂಡವನ್ನು ಮಣಿಸಿದೆ. ಪಾಲಿಬೆಟ್ಟ ಸಿಎಫ್.ಸಿ ತಂಡದ ಪರವಾಗಿ ಶಮ್ಮಾಸ್ ಎರಡು ಹಾಗೂ ಆಶಿರ್ ಮತ್ತು ಆಶಿಕ್ ತಲಾ ಒಂದು ಗೋಲು ಬಾರಿಸಿದರು.ಕಾಫಿಲ್ಯಾಂಡ್ ತಂಡ ಪರವಾಗಿ ಅಸ್ಕರ್ ಎರಡು ಗೋಲು ದಾಖಲಿಸಿದರು.ಪಾಲಿಬೆಟ್ಟ ಸಿಎಫ್.ಸಿ ತಂಡದ ಶಮ್ಮಾಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.