ನಾಡಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವುದರಲ್ಲಿ ಹೆಗ್ಗಡೆ ಸಮಾಜ ಮುಂಚೂಣಿಯಲ್ಲಿದೆ: ಶಾಸಕ ಎ.ಎಸ್ ಪೊನ್ನಣ್ಣ

ನಾಡಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವುದರಲ್ಲಿ ಹೆಗ್ಗಡೆ ಸಮಾಜ  ಮುಂಚೂಣಿಯಲ್ಲಿದೆ: ಶಾಸಕ ಎ.ಎಸ್ ಪೊನ್ನಣ್ಣ

ಮಡಿಕೇರಿ: ಮೂರ್ನಾಡು ಪಟ್ಟಣದ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ, ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಆಯೋಜನೆಗೊಂಡಿರುವ ವಿವಿಧ ಕ್ರೀಡಾ ಕಾರ್ಯಕ್ರಮದಲ್ಲಿ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನ ವರು ಭಾಗವಹಿಸಿ ಎಲ್ಲರಿಗೂ ಶುಭ ಕೋರಿದರು.     ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು, ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾಡಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವುದರಲ್ಲಿಯೂ ಮುಂಚೂಣಿಯಲ್ಲಿದೆ.   ಅದೇ ರೀತಿ ಈ ಸಂಘದ ವತಿಯಿಂದ ಆಯೋಜನೆಗೊಂಡಿರುವ ಕ್ರೀಡಾಕೂಟವು ಸಹ ನಾಡಿನ ಕ್ರೀಡಾ ಪ್ರೇಮಿಗಳ ಏಳಿಗೆಗೆ ಸಹಕಾರಿಯಾಗಲಿದ್ದು, ಹಲವರಿಗೆ ತಮ್ಮ ಕ್ರೀಡಾ ಭವಿಷ್ಯ ರೂಪಿಸಿಕೊಳ್ಳಲು ಇದು ಮಾರ್ಗವಾಗಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ನೀಡಿದ ಸನ್ಮಾನವನ್ನು ಮಾನ್ಯ ಶಾಸಕರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಇದ್ದರು.