ಇಂದಿನಿಂದ ಗೋಣಿಕೊಪ್ಪಲಿನಲ್ಲಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಕಲರವ: ಯಾರ ಮಡಿಲಿಗೆ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಕಪ್!!

May 1, 2025 - 00:52
May 1, 2025 - 00:56
 0  40
ಇಂದಿನಿಂದ  ಗೋಣಿಕೊಪ್ಪಲಿನಲ್ಲಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಕಲರವ:  ಯಾರ ಮಡಿಲಿಗೆ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಕಪ್!!

ಮಡಿಕೇರಿ:ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ ವತಿಯಿಂದ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಆಲ್ ಇಂಡಿಯಾ ಫೈವ್ಸ್ ಮಾದರಿಯ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಮೇ‌ 01 ರಿಂದ 04ರವರೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಲ್ ಸ್ಟಾರ್ ಯೂತ್ ಕ್ಲಬ್ ಸಲಹೆಗಾರ್ತಿ ಮನೆಯಪಂಡ ಶೀಲಾ ಬೋಪಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ 01ರ ಸಂಜೆ ನಾಲ್ಕು ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಸ್ಟಾರ್ ಯೂತ್ ಕ್ಲಬ್ ಅಧ್ಯಕ್ಷರಾದ ಸುಧಾಕರ್ ರೈ(ಚುಮ್ಮಿ ರೈ) ವಹಿಸಲಿದ್ದಾರೆ.ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಆಲ್ ಸ್ಟಾರ್ ಯೂತ್ ಕ್ಲಬ್ ಗೌರವಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ,ಟಿಟಿಪಿ ಗ್ರೂಪ್ ಮಾಲೀಕ ಟಿ.ಟಿ ಪ್ರಭು, ಸರ್ವದೇವಿವತಾ ಶಿಕ್ಷಣ ಸಂಸ್ಥೆಯ ಕೆಪಿ ಪ್ರಕಾಶ್ ಮೊಣ್ಣಪ್ಪ,ಚೈನ್ನೈ ಪ್ರೆಸ್ಟೀಜ್ ಗ್ರೂಪ್ ಮುಖ್ಯಸ್ಥರಾದ ಭಾನು ರಘುನಾಥನ್,ಮೈಸೂರಿನ ತುಷಾ ಎಂಟರ್ಪ್ರೈಸಸ್ ಮಾಲೀಕ ವಿನೋದ್ ಉತ್ತಪ್ಪ,ಯುವ ಕಾಂಗ್ರೆಸ್ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅನೂಪ್ ಕುಮಾರ್ ಸುಂಟ್ಟಿಕೊಪ್ಪ,ಪಾಲಿಬೆಟ್ಟ ಟಾಟಾ ಕಾಫಿ ವ್ಯವಸ್ಥಾಪಕರಾದ ಎ.ಎಸ್ ಮುತ್ತಣ್ಣ,ಮಾಜಿ ಫುಟ್ಬಾಲ್ ಆಟಗಾರ ಕೆ.ಸಿ ಅಚ್ಚಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ವಿಜು ಸುಬ್ರಮಣಿ,ಗೋಣಿಕೊಪ್ಪಲಿನ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮ್ಯಾನೇಜರ್ ಮಾಚಮಾಡ ತನುಜಾ,ಎಂಐ ಲೈಫ್ ಸ್ಟೈಲ್ ಮಾರ್ಕೆಟಿಂಗ್ ಪ್ರಮುಖರಾದ ಫಾತಿಮಾ,ಕೊಸ್ಟಲ್ ರಾಕ್ ಮೈಸೂರು ಇದರ ಮಾಲೀಕರಾದ ಮನು ಕುಮಾರ್,ನಮ್ಮ ಕುಡ್ಲ ಗೋಣಿಕೊಪ್ಪ ಇದರ ಮಾಲೀಕರಾದ ಕಾರ್ತಿಕ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಎಂ.,ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಕೆ.ಎಂ ತಿಮ್ಮಯ್ಯ,ಗ್ರಾಮ ಪಂಚಾಯಿತಿ ಸದಸ್ಯರಾದ ಧ್ಯಾನ್ ಸುಬ್ಬಯ್ಯ, ಹಾಗೂ ರಾಮ್ ದಾಸ್ ಭಾಗವಹಿಸಲಿದ್ದಾರೆ.

ಸಾಧಕರಿಗೆ ಸನ್ಮಾನ:

ಆಲ್ ಸ್ಟಾರ್ ಕೊಡಗು ವರ್ಲ್ಡ್‌ ಕಪ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಸಾಧಕರಾದ ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಪೂವಯ್ಯ,ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ (ಈಶ್ವರ್), ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ‌ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ,ಕೊಡಗು ಎಫ್.ಸಿ ಅಧ್ಯಕ್ಷ ಡಾ.ಅಮೃತ್ ನಾಣಯ್ಯ,ಲಿಟಲ್ ಫ್ಲವರ್ ಸಂಸ್ಥೆಯ ದೈಹಿಕ ಶಿಕ್ಷಣ ಮುಖ್ಯಸ್ಥರಾದ ಪ್ರಕಾಶ್ ಎಂ.ಆರ್ ಹಾಗೂ ಕೊಡಗು ಜಿಲ್ಲೆಯ ಫುಟ್ಬಾಲ್ ದಿಗ್ಗಜ ಹಾಗೂ ಚಿಕ್ಕಮಗಳೂರು ಆ್ಯಂಬರ್ ವ್ಯಾಲಿ ಶಾಲೆಯ ತರಬೇತುದಾರ ಅಬೂಬಕರ್ ಉಬೈಸ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಆಲ್ ಸ್ಟಾರ್ ಯುವಕ‌ ಸಂಘದ ಸಲಹೆಗಾರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0