ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್: ಗ್ರೀನ್ ಸ್ಟಾರ್ ಪಾಲೆಮಾಡು ತಂಡಕ್ಕೆ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ನಾಲ್ಕನೇ ಪಂದ್ಯದಲ್ಲಿ ಗ್ರೀನ್ ಸ್ಟಾರ್ ಕ್ಯಾಲಿಕೆಟ್ ಪಾಲೆಮಾಡು ತಂಡವು 02-01 ಗೋಲುಗಳ ಅಂತರದಿಂದ ರೆಶ್ ಹವರ್ ತಂಡದ ವಿರುದ್ಧ ಗೆಲುವು ಸಾಧಿಸಿದೆ.ಗ್ರೀನ್ ಸ್ಟಾರ್ ತಂಡದ ಪರವಾಗಿ ಅಮರನಾಥ್ ಎರಡು ಗೋಲು ಬಾರಿಸಿ ಮಿಂಚಿ,ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.ರಶ್ ಹವರ್ ತಂಡದ ಪರವಾಗಿ ಆಕಾಶ್ ಒಂದು ಗೋಲು ಬಾರಿಸಿ ತಂಡಕ್ಕೆ ನೆರವಾದರು.