ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನ ಪಂದ್ಯ:ಯುನೈಟೆಡ್ ಎಫ್.ಸಿ ಪೆರುಂಬಾಡಿ ತಂಡಕ್ಕೆ ರೋಚಕ ಗೆಲುವು

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನ ಪಂದ್ಯ:ಯುನೈಟೆಡ್ ಎಫ್.ಸಿ ಪೆರುಂಬಾಡಿ ತಂಡಕ್ಕೆ ರೋಚಕ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಎರಡನೇ ದಿನದ ಎರಡನೇ ಪಂದ್ಯದಲ್ಲಿ ಯುನೈಟೆಡ್ ಎಫ್.ಸಿ‌ ಪೆರುಂಬಾಡಿ‌ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ.ಗನ್ನರ್ಸ್ ಎಫ್.ಸಿ ತಂಡವು 2-0. ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿತು.ಆದರೆ ಪಂದ್ಯದ ಕೊನೆಯ ಕ್ಷಣದಲ್ಲಿ ಪೆರುಂಬಾಡಿ ತಂಡದ ಸ್ಟಾರ್ ಆಟಗಾರ ಫಯಾಝ್ ಎರಡು ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತು.ಗನ್ನರ್ಸ್ ತಂಡದ ಪರವಾಗಿ ಟಿಕ್ಕಿ ಅವಿನಾಶ್ ತಲಾ ಒಂದು ಗೋಲು ಬಾರಿಸಿದರು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 03-01 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.ಯುನೈಟೆಡ್ ತಂಡದ ಫಯಾಜ್ ಪಡೆದುಕೊಂಡರು.