ಮೇ 24 ಮತ್ತು 25 ರಂದು 40 ವರ್ಷ ಮೇಲ್ಪಟ್ಟವರ ಕೊಡಗು ಮುಸ್ಲಿಂ ವಾಲಿಬಾಲ್ ಕಪ್

ಮಡಿಕೇರಿ: ಇದೇ ಮೊದಲ ಬಾರಿಗೆ ಎಸ್.ಇ.ಎಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೇತ್ರಿ ಸಂಘವು ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು 40 ವರ್ಷ ಮೇಲ್ಪಟ್ಪ ಪುರುಷರಿಗೆ ಇದೇ ಮೇ ತಿಂಗಳು 24 ಮತ್ತು 25ರಂದು ಬೇತ್ರಿಯಲ್ಲಿ ಆಯೋಜಿಸಿದೆ. ಕೊಡಗು ಜಿಲ್ಲೆಯ ಮುಸ್ಲಿಂ ಸಮುದಾಯದಲ್ಲಿ 40 ವರ್ಷ ಮೇಲ್ಪಟ್ಟ ಅನುಭವಿ ವಾಲಿಬಾಲ್ ಆಟಗಾರರು ಇದ್ದು,ಅವರಿಗೆ ವೇದಿಕೆ ಒದಗಿಸಿಕೊಡುವ ನಿಟ್ಟಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮೇ 25ರಂದು ಸಹೋದರ ಬಾಂಧವರ ನಡುವೆ ನಡುವೆ ಸೌಹಾರ್ದ ಪಂದ್ಯ ಕೂಡ ನಡೆಯಲಿದ್ದು, ತಂಡವನ್ನು ನೋಂದಾಯಿಸಲು 8971242172 ರಶೀದ್ ಹಾಗೂ 9845762800 ಕಬೀರ್ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.