ಅರಮನೆ ನಗರಿ ಮೈಸೂರಿನಲ್ಲಿ MDMA ಫ್ಯಾಕ್ಟರಿ:ಬಗೆದಷ್ಟು ಬಯಲಾಗುತ್ತಿದೆ ಡ್ರಗ್ಸ್ ಜಾಲ!!

ಅರಮನೆ ನಗರಿ ಮೈಸೂರಿನಲ್ಲಿ MDMA ಫ್ಯಾಕ್ಟರಿ:ಬಗೆದಷ್ಟು ಬಯಲಾಗುತ್ತಿದೆ ಡ್ರಗ್ಸ್ ಜಾಲ!!

ಮೈಸೂರು: ಮಾದಕ ಜಾಲದ ಬೇರು ಮೈಸೂರಿನಲ್ಲಿರುವ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ ಬಳಿಕ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬುಧವಾರ ಸಂಸತ್‌ನಲ್ಲಿ ಪ್ರತಿಧ್ವನಿಸಿ ದೇಶದ ಗಮನ ಸೆಳೆದಿದೆ. ಹೌದು ಮೈಸೂರಿನಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ನಾಲ್ವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಅದರ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಆರೋಪಿಗಳು ಪತ್ತೆಯಾಗಿಲ್ಲ. 4 ಮೈಸೂರಿನಲ್ಲಿ ಡ್ರಗ್ಸ್ ಅಡ್ಡೆಯ ಮೇಲೆ ದಾಳಿ ನಡೆಸಿದವರು ಮಹಾರಾಷ್ಟ್ರ ಪೊಲೀಸರು, ಬಂಧಿಸಲ್ಪಟ್ಟ ಆರೋಪಿಗಳು ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳದವರಾಗಿದ್ದಾರೆ. ಸುಮಾರು 100 ಕೋಟಿ ರೂ. ಮೌಲ್ಯದ 50 ಕೆ.ಜಿ.ಯಷ್ಟು ಬೃಹತ್ ಪ್ರಮಾಣದ ಎಂಡಿಎಂಎ ಪತ್ತೆಯಾಗಿದೆ. ಇದೆಲ್ಲ ಒಂದೆರಡು ವಾರದಲ್ಲಿ ಪೌಡ‌ರ್ ಆಗಿ ಬದಲಾಗುತ್ತಿತ್ತು. ಹಾಗಾದರೆ ಆರೋಪಿಗಳೆಲ್ಲ ಕಚ್ಚಾ ವಸ್ತುಗಳನ್ನು ಸಾಗಣೆ ಮಾಡಿದ್ದು ಹೇಗೆ ಎಂಬುದು ಕುತೂಹಲಕಾರಿ ವಿಚಾರ.

ಸಾಗಣೆಗೆ ಹತ್ತಾರು ದಾರಿ:

ಮಾದಕ ವಸ್ತುಗಳ ಸಾಗಣೆಗೆ ಹತ್ತಾರು ದಾರಿಗಳಿವೆ. ಎಪಿಎಂಸಿ ಮಾರುಕಟ್ಟೆಗೆ ಬರುವ ಹಣ್ಣಿನ ಲಾರಿಗಳು, ಖಾಸಗಿ ಕೊರಿಯರ್ ಸೇವೆಗಳು, ಹ್ಯಾಂಡಿಕ್ರಾಫ್ಟ್ ಉತ್ಪನ್ನಗಳು, ಬೃಹತ್ ಪಾರ್ಸಲ್ ಗಳನ್ನು ಹೊತ್ತೊಯ್ಯುವ ಗೂಡ್ಸ್ ವಾಹನಗಳನ್ನು ಅತ್ಯಂತ ನಾಜೂಕಾಗಿ ಮಾದಕ ವಸ್ತುಗಳ ಸಾಗಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರೇ ಇಲ್ಲದ ವಿಳಾಸಕ್ಕೆ ಅಂಚೆ ಪಾರ್ಸಲ್‌ಗಳ ರೂಪದಲ್ಲೂ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎಂಬುದು ಪೊಲೀಸ್ ಮೂಲಗಳಿಂದಲೇ ಗೊತ್ತಾಗಿದೆ. ಮೈಸೂರಿನ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಉನ್ನತಿ ನಗರದ ಕಾರು ಶೆಡ್ ನಲ್ಲಿ ಮಾದಕ ವಸ್ತು ಎಂಡಿಎಂಎ ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸರು ಭಾನುವಾರ ಪತ್ತೆ ಹಚ್ಚಿದ್ದರು. ಇದರ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌ಗಳೆಲ್ಲ ಬೀದಿಗಿಳಿದಿದ್ದಾರೆ. ಹಾಸ್ಟೆಲ್, ಲಾಡ್ಸ್, ಶೆಡ್‌ ಗಳನ್ನೆಲ್ಲ ಶೋಧಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನೂ ತಪಾಸಣೆ ಮಾಡುತ್ತಿದ್ದಾರೆ. ಉದಯಗಿರಿ, ಮಂಡಿ, ನರಸಿಂಹರಾಜ, ಲಷ್ಕರ್ ಹಾಗೂ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಒಂದು ರೀತಿಯ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ರಾಜಕಾರಣಿಗಳು, ಅಧಿಕಾರಿಗಳಿಗೆಲ್ಲ ಗೊತ್ತು. ಪೊಲೀಸ್ ಅಧಿಕಾರಿಗಳಿಗೆ ನಿಜಕ್ಕೂ ಇಚ್ಚಾಸಕ್ತಿ ಇದ್ದರೆ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿರಲಿಲ್ಲ. ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ ಜಾಲ, ಹಿಂದೆ ಕೇರಳದ ಪಾಲಿಕ್ಕಾಡ್, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಾದಕ ವಸ್ತು ಉತ್ಪಾದಿಸಿತ್ತು. ಮೈಸೂರಿನ ಕೆಲ ಏರಿಯಾಗಳಲ್ಲಿ ನಿತ್ಯವೂ ಮಾದಕ ವಸ್ತುಗಳು ಬಳಕೆಯಾಗಿರುವುದು ಸಾರ್ವಜನಿಕ ಸತ್ಯ.

ಕೋಟ್ಯಂತರ ರೂ. ದಂಧೆ:

ಮಾದಕ ವಸ್ತುಗಳ ಪೈಕಿ ತಂಬಾಕು, ಗಾಂಜಾ, ಸಲ್ಯೂಷನ್ ಮುಂತಾದ ನಶೆ ಬರುವ ವಸ್ತುಗಳೆಲ್ಲ ಬೇಸಿಕ್. ಮೈಸೂರಿನ ಮಟ್ಟಿಗೆ ಗಾಂಜಾ ಮಾಮೂಲು. ಆದರೆ ಉನ್ನತಿನಗರದ ಶೆಡ್‌ನಲ್ಲಿ ಸಿಕ್ಕಿರುವುದು ಎಂಡಿಎಂಎ. ಸುಮಾರು 100 ಕೋಟಿ ರೂ. ಮೌಲ್ಯದ 50 5.4. ಕೆಜಿ 1 6.4. 2 ಅಂದಾಜು 50 ಲಕ್ಷ ರೂ., ಅಂತಾರಾಷ್ಟ್ರೀಯ ಕಾಳಸಂತೆಯಲ್ಲಿ ಕೆ.ಜಿ.ಗೆ 1.5 ಕೋಟಿ ರೂ.ವರೆಗೂ ಮಾರಾಟವಾಗುತ್ತಿದೆ. ಈ ಕಾರಣಕ್ಕಾಗಿಯೇ 1000 ಚದರ ಆಡಿ ಶೆಡ್‌ಗೆ ದಂಧೆಕೋರರು ತಿಂಗಳಿಗೆ 1.20 ಲಕ್ಷ ರೂ. ಬಾಡಿಗೆ ಕೊಡುತ್ತಿದ್ದರು. ಗಾಂಜಾ ಕೇಸ್‌ನಲ್ಲಿ ಪತ್ತೆಯಾದರೆ ಪೊಲೀಸರು 1500 ರೂ. ದಂಡ ಹಾಕಿ ಕಳುಹಿಸುತ್ತಾರೆ. ಮಾರಕವಾದ ಮಾದಕ ವಸ್ತುಗಳ ಕೇಸ್‌ನಲ್ಲಿ ಆರೋಪಿಗಳನ್ನು ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

 60 ಪ್ರಕರಣ ದಾಖಲು, 6ಮಂದಿ ಬಂಧನ:

 ಪ್ರಕರಣ ಬೆಳಕಿಗೆ ಬಂದ ಬಳಿಕ ಕಳೆದೆರಡು ದಿನಗಳಿಂದ ಕೂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದರಲ್ಲಿ ಯಾರೆಲ್ಲಾ ಸೇವನೆ ಮಾಡುತ್ತಿದ್ದಾರೋ ಎಂಬ ಬಗ್ಗೆ ತನಿಖೆ ನಡೆಸಿದ್ದೇವೆ. 60 ಪ್ರಕರಣಗಳು ಪತ್ತೆ ಹಚ್ಚಿ, 06 ಮಂದಿ ಪ್ಲೆಡರ್ಸ್‌ಗಳನ್ನು ಬಂಧಿಸಲಾಗಿದೆ. ಅಂದು ನಮ್ಮ ಸ್ಥಳೀಯ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಮೊದಲ ದಿನ 18.08ಕೆಜಿ ಎಂಡಿಎಂಎ ಸಿಕ್ಕಿರುವ ಬಗ್ಗೆ ಮಾಹಿತಿಯಿದೆ. ಆದರೆ, ಹೆಚ್ಚು ಸಿಕ್ಕಿರುವ ಕುರಿತಾಗಲಿ ಅಥವಾ ಅವರ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆ ಬಗ್ಗೆಯಾಗಲಿ ನನ್ನ ಬಳಿ ಯಾವುದೇ ಮಾಹಿತಿಯಿಲ್ಲ. ಅದರ ಬಗ್ಗೆ ಮಾತನಾಡಲ್ಲ.

 ಸೀಮಾಲಾಟ್ಕರ್‌, ನಗರ ಪೊಲೀಸ್‌ ಆಯುಕ್ತೆ